ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸ್ಯಾಂಡಲ್ ವುಡ್ ನಿರ್ದೇಶಕ ಯೋಗರಾಜ್ ಭಟ್ ಅವರ ಮಾವ ಸತ್ಯ ಉಮ್ಮತ್ತಾಲ್ ನಿಧನ

ಸ್ಯಾಂಡಲ್ ವುಡ್ ನಿರ್ದೇಶಕ ಯೋಗರಾಜ್ ಭಟ್ ಅವರ ಮಾವ ಸತ್ಯ ಉಮ್ಮತ್ತಾಲ್ ನಿಧನ

 


ಬೆಂಗಳೂರು: ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರ ಮಾವ ಹಾಗೂ ನಟ ಸತ್ಯ ಉಮ್ಮತ್ತಾಲ್ (70) ಅವರು, ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.


ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರ ಪತ್ನಿಯ ತಂದೆ, ನಟ ಸತ್ಯ ಉಮ್ಮತ್ತಾಲ್ ( Actor Sathya Ummattal ) ಬೆಂಗಳೂರಿನಲ್ಲಿ ಅವರೊಂದಿಗೆ ಮನೆಯಲ್ಲಿ ಜೊತೆಯಾಗಿದ್ದರು.


ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.


ನಿರ್ದೇಶಕ ಪವನ್ ಕುಮಾರ್ ಅವರ ಲೈಫು ಇಷ್ಟೇನೆ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಸಿನಿ ರಂಗಕ್ಕೆ ನಟರಾಗಿ ಸತ್ಯ ಉಮ್ಮತ್ತಾಲ್ ಪ್ರವೇಶಿಸಿದ್ದರು. ನಂತರ ವಿವಿಧ ಸಿನಿಮಾಗಳಲ್ಲಿ ನಟರಾಗಿ ಕಾಣಿಸಿಕೊಂಡಿದ್ದರು.


ಯೋಗರಾಜ್ ಭಟ್ ನಿರ್ದೇಶದ ಅನೇಕ ಚಿತ್ರಗಳಲ್ಲಿ ಅವರ ಮಾವ ಸತ್ಯ ಕಾಣಿಸಿಕೊಂಡಿದ್ದಾರೆ. ಜಯಮ್ಮನ ಮಗ, ಕೆಂಡಸಂಪಗಿ, ಕಡ್ಡಿಪುಡಿ, ದನಕಾಯೋನ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು.


0 تعليقات

إرسال تعليق

Post a Comment (0)

أحدث أقدم