ಮಂಗಳೂರು: ಇಲ್ಲಿನ ಕದ್ರಿಹಿಲ್ಸ್ ಲಯನ್ಸ್ ಕ್ಲಬ್ ವತಿಯಿಂದ ಜೂ. 18ರಂದು ಅಶೋಕಭವನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಂಗಳೂರಿನ ಮಂಗಳಾ ಆಸ್ಪತ್ರೆಯ ಮೂಲವ್ಯಾಧಿ ಕ್ಷಾರ ಚಿಕಿತ್ಸಕ ಮತ್ತು ಶಸ್ತ್ರ ಚಿಕಿತ್ಸಕ ಡಾ ಸುರೇಶ ನೆಗಳಗುಳಿ ಇವರನ್ನು ಫಲ ಶಾಲು ನೆನಪಿನ ಕಾಣಿಕೆ ಸಹಿತ ಸನ್ಮಾನಿಸಲಾಯಿತು.
ಲಯನ್ಸ್ ಪ್ರಾಂತೀಯ ಅಧ್ಯಕ್ಷೆ ಸ್ವರೂಪಾ ಶೆಟ್ಟಿ, ಲಯನ್ಸ್ ಅಧ್ಯಕ್ಷ ಜಗದೀಶ್ ಪೈ, ಕಾರ್ಯದರ್ಶಿ ಸುಮಿತ್ರಾ ಶೆಟ್ಟಿ, ಲಯನ್ ವಿಜಯ ಶೆಟ್ಟಿ, ಲಯನ್ ವಿದ್ಯಾ ಕಾಮತ್, ಲಯನ್ ಲತಾ ಪೈ, ಲಯನ್ ಅಶೋಕ ಕಾಮತ್, ಲಯನ್ ಎನ್ ಟಿ ರಾಜ, ಲಯನ್ ಕೇಶವ ಭಟ್, ಲಯನ್ ಪ್ರಶಾಂತ ಪೈ, ಲಯನ್ ಪೂಜಾ ಪೈ, ಲಯನ್ ಅರೆಹೊಳೆ ಸದಾಶಿವ ರಾವ್ ಸಹಿತ ಇತರ ಹಲವಾರು ಗಣ್ಯರು ಮತ್ತು ಲಿಯೋ ಕ್ಲಬ್ ಪದಾಧಿಕಾರಿಗಳಾದ ಸಾಕ್ಷಿ, ಅದಿತಿ ಮತ್ತು ಸುಮೇಧಾ ಸಹ ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಲಯನ್ ಜ್ಯೋತಿ ಕೇಶವ ಇವರು ಸನ್ಮಾನಿತರ ಪರಿಚಯ ಮಾಡಿದರು. ಡಾ. ನೆಗಳಗುಳಿ ಅವರ ವೈದ್ಯಕೀಯ ಹಾಗೂ ಸಾಹಿತ್ಯದ ಸೇವೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತುಷಾರ ಚಿತ್ರ ಕವನ ಸ್ಪರ್ಧೆಗಳಲ್ಲಿ ವಿಜೇತ ಕವನ ಸಂಕಲನ ತುಷಾರ ಬಿಂದು, ಆರು ಭಾಷೆಯ ಗಜಲ್ ಸಂಕಲನ ನೆಗಳಗುಳಿ ಗಜಲ್ಸ್ ಸಹಿತ ಲೋಕಾರ್ಪಣೆ ಯಾದ ಹತ್ತು ಪುಸ್ತಕಗಳ ಪರಿಚಯ ಮಾಡಿದರು.
ಅಧ್ಯಕ್ಷರು ಸನ್ಮಾನಿಸಿ ಮಾತನಾಡುತ್ತಾ ಬಹುಮುಖ ಪ್ರತಿಭೆ, ಸಾಹಿತ್ಯ ರಂಗದ ಹಲವಾರು ಸಾಧನೆಗಳು, ವೈದ್ಯಕೀಯ ಕ್ಷೇತ್ರದಲ್ಲಿ ಶೈಕ್ಷಣಿಕ ಹಾಗೂ ಸೇವೆಗಳ ನಿರಂತರತೆ ಇತ್ಯಾದಿಗಳನ್ನು ಹೊಂದಿದ ಡಾ ಸುರೇಶ ನೆಗಳಗುಳಿ ಲಯನ್ ಸದಸ್ಯರೂ ಆಗಿರುವುದು ಅತೀ ಸಂತಸದ ವಿಚಾರ ಎಂದರು.
ಡಾ ಸುರೇಶ ನೆಗಳಗುಳಿಯವರು ತನ್ನ ಮನೆಮಂದಿ ಸನ್ಮಾನಿಸಿದಷ್ಟೇ ಅಮೂಲ್ಯವಾದ ಇಂದಿನ ಪುರಸ್ಕಾರವು ಇತರ ಹಲವಾರು ಪ್ರಶಸ್ತಿಗಳಿಗಿಂತ ಭಿನ್ನ ಎಂದರಲ್ಲದೆ ಸಭಿಕರ ಕೋರಿಕೆ ಮೇರೆಗೆ ಸ್ಥಳದಲ್ಲೇ ಆಶು ಚುಟುಕು ರಚಿಸಿ ವಾಚಿಸಿದರು. ಬಳಿಕ ಧನ್ಯವಾದ ಸಮರ್ಪಣೆ ಯೊಂದಿಗೆ ಸಭೆಯು ಮುಕ್ತಾಯವಾಯಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق