ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕಿ ಶ್ರೀವಿದ್ಯಾ ಜಿ ಅವರು 'ಎಫೀಶಿಯಂಟ್ ಸ್ಕೀಮ್ಸ್ ಫಾರ್ ಎಂ.ಆರ್.ಐ ರೀಕಂಸ್ಟ್ರಕ್ಷನ್ ಯುಸಿಂಗ್ ಕಂಪ್ರೆಸಿವ್ ಸೆನ್ಸಿಂಗ್' ಎಂಬ ವಿಷಯದ ಬಗೆಗೆ ಮಂಡಿಸಿದ ಸಂಶೋಧನಾ ಪ್ರಭಂದಕ್ಕೆ ಬೆಂಗಳೂರಿನ ರೇವಾ ವಿಶ್ವವಿದ್ಯಾಲಯವು ಪಿ.ಎಚ್.ಡಿ ಪದವಿಯನ್ನು ನೀಡಿದೆ.
ಅವರು ರೇವಾ ಯುನಿವರ್ಸಿಟಿಯ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕಿ ಡಾ. ಭಾರತಿ ಎಸ್.ಎಚ್. ಅವರ ಮಾರ್ಗದರ್ಶನದಲ್ಲಿ ಈ ಸಂಶೋಧನೆ ನಡೆಸಿದ್ದರು. ಶ್ರೀವಿದ್ಯಾ ಅವರು ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದ ವಿ.ಗೋಪಾಲಕೃಷ್ಣ ಭಟ್ ಹಾಗೂ ಸುಮತಿ ಜಿ. ಭಟ್ ಅವರ ಪುತ್ರಿ ಹಾಗೂ ವರ್ಟ್ಸಿಲ ಇಂಡಿಯಾ ಲಿ. ನ ಸೀನಿಯರ್ ಇಂಜಿನಿಯರ್ ಎ.ಎಚ್. ಗುರುಪ್ರಸಾದ್ ಅವರ ಪತ್ನಿ ಆಗಿರುವರು.
Post a Comment