ಸುಳ್ಯ : ಮಗುವಿನ ಜೊತೆಗೆ ತಾಯಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ತಳೂರು ಎಂಬಲ್ಲಿ ನಡೆದಿದೆ.
ಸದ್ಯ ಮಗು ಪೂರ್ವಿಕಾ ಬದುಕುಳಿದಿದ್ದು, ತಾಯಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.
ತಳೂರು ದಯಾನಂದ ಎಂಬವರ ಪತ್ನಿ ಗೀತಾ ಮೃತಪಟ್ಟ ಮಹಿಳೆ. ಇವರು ಎನ್.ಎಮ್.ಸಿ. ನಲ್ಲಿ ಕಛೇರಿ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಘಟನೆಯಲ್ಲಿ ಮಗು ಕೆರೆಯೊಳಗೆ ಕಲ್ಲಿನ ಸಹಾಯದಿಂದ ಬದುಕುಳಿದಿದ್ದು, ಸುಳ್ಯ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಯಿತು.
ಮನೆಯವರು ಹಾಗೂ ಸ್ಥಳೀಯರ ಸಹಾಯದಿಂದ ಮಗುವನ್ನು ರಕ್ಷಿಸಲಾಯಿತು ಎಂದು ತಿಳಿದುಬಂದಿದೆ.
إرسال تعليق