ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಂಗಳೂರು; ರಸ್ತೆ ಅಪಘಾತ; ಇಬ್ಬರು ಸಾವು, ನಾಲ್ವರಿಗೆ ಗಾಯ

ಮಂಗಳೂರು; ರಸ್ತೆ ಅಪಘಾತ; ಇಬ್ಬರು ಸಾವು, ನಾಲ್ವರಿಗೆ ಗಾಯ

 


ಮಂಗಳೂರು-ಮೂಡಬಿದ್ರಿ ರಾಷ್ಟ್ರೀಯ ಹೆದ್ದಾರಿಯ ಗುರುಪುರ ಕೈಕಂಬ ಹತ್ತಿರ ಎಕೆಯು ಶಾಲೆಯ ಬಳಿ ಗುರುವಾರ ಮುಂಜಾನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸಾವಿಗೀಡಾಗಿ, ನಾಲ್ವರು ಗಾಯಗೊಂಡ ಘಟನೆಯೊಂದು ನಡೆದಿದೆ.


ಪುಂಡಲೀಕ (60) ಮತ್ತು ಅಶ್ವಿನಿ (29) ಮೃತಪಟ್ಟವರು.


5 ವರ್ಷದ ಶ್ರೇಯಾ ಸಹಿತ ಸಂತೋಷ, ಪುಷ್ಪಾ, ಮತ್ತು ಕಾರು ಚಾಲಕ ಸೊಹೈಲ್ ಎಂಬವರಿಗೆ ಗಂಭೀರ ಗಾಯಗಳಾಗಿವೆ.


ಪುಂಡಲೀಕ ಅವರ ಚಿಕಿತ್ಸೆಗಾಗಿ ಕುಟುಂಬಸ್ಥರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತೆರಳಲು ಸೊರಬದಿಂದ ಬುಧವಾರ ರಾತ್ರಿ 12 ಗಂಟೆಗೆ ವ್ಯಾಗನರ್ ಕಾರಿನಲ್ಲಿ ಹೊರಟಿದ್ದರು.


 ಗುರುವಾರ ಮುಂಜಾನೆ 5 ಗಂಟೆ ವೇಳೆಗೆ ಕಾರು ಗುರುಪುರ ಕೈಕಂಬದ ಸಮೀಪದ ಎಕೆಯು ಶಾಲೆಯ ಬಳಿ ಬರುತ್ತಿದ್ದಂತೆ ಹೆದ್ದಾರಿಯ ಬಲ ಬದಿಯಲ್ಲಿರುವ ಮರಕ್ಕೆ ಗುದ್ದಿ ವಿರುದ್ಧ ದಿಕ್ಕಿಗೆ ತಿರುಗಿ ನಿಂತಿದೆ. 


ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಗಿದೆ.

0 تعليقات

إرسال تعليق

Post a Comment (0)

أحدث أقدم