ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗ್ರಾಹಕರಿಗೆ ಗುಡ್ ನ್ಯೂಸ್; ತರಕಾರಿ ಬೆಲೆಯಲ್ಲಿ ಇಳಿಕೆ

ಗ್ರಾಹಕರಿಗೆ ಗುಡ್ ನ್ಯೂಸ್; ತರಕಾರಿ ಬೆಲೆಯಲ್ಲಿ ಇಳಿಕೆ

 


ಬೆಂಗಳೂರು : ಬೆಲೆ ಏರಿಕೆಯಿಂದ ಕಂಗೆಟ್ಟ ಜನತೆಗೆ ಇದೀಗ ಟೊಮೆಟೊ ಸೇರಿದಂತೆ ತರಕಾರಿ ಬೆಲೆಯಲ್ಲಿ ಇಳಿಕೆಯಾಗಿದೆ.

ಮಳೆಯಿಂದಾಗಿ ತರಕಾರಿ ಬೆಲೆ ನಾಶವಾಗಿರುವುದರಿಂದ ತರಕಾರಿ ಬೆಲೆ ಏರಿಕೆಗೆ ಕಾರಣವಾಗಿತ್ತು. ಮಳೆಯಿಂದಾಗಿ ತರಕಾರಿ ಬೆಳೆಗಳು ನಾಶವಾಗಿರುವುದರಿಂದ ತರಕಾರಿ ಬೇಡಿಕೆಯಷ್ಟು ಪೂರೈಕೆಯಾಗುತ್ತಿರಲಿಲ್ಲ ಆದರೆ. ಇದೀಗ ಮಳೆ ಕೊಂಚ ತಗ್ಗಿರುವ ಹಿನ್ನೆಲೆ ಟೊಮೆಟೊ ಸೇರಿದಂತೆ ತರಕಾರಿಗಳು ಪೂರೈಕೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ತರಕಾರಿ ಬೆಲೆಯಲ್ಲಿ ಕೊಂಚ ಇಳಿಕೆಯಾಗಿವೆ.


ಬೆಂಗಳೂರಿನಲ್ಲಿ ತರಕಾರಿ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದ್ದು, ಟೊಮೆಟೊ ದರ ಕೆಜಿಗೆ 85 ರೂ. ಇದ್ದರೆ ಸಾಂಬರ್ ಈರುಳ್ಳಿ 47 ರೂ. ಇದೆ. ಹುರಳೀಕಾಯಿ 85 ರೂ. ಸೀಮೆ ಬದನೆಕಾಯಿ 35 ರೂ., ಬೀಟ್‍ರೂಟ್ 35 ರೂ.ಗೆ ಮಾರಾಟವಾಗುತ್ತಿದೆ.


ಹಸಿಮೆಣಸಿನಕಾಯಿ 54 ರೂ., ದಪ್ಪಮೆಣಸಿನಕಾಯಿ 75 ರೂ., ಹಾಗಲಕಾಯಿ 55 ರೂ., ಸೌತೆಕಾಯಿ 37 ರೂ. ನುಗ್ಗೇಕಾಯಿ 110 ರೂ. ಆಲೂಗಡ್ಡೆ 40 ರೂ., ಮೂಲಂಗಿ 36 ರೂ. ಬೆಳ್ಳುಳ್ಳಿ 96 ರೂ.ಗೆ ಇಳಿಕೆಯಾಗಿದೆ.


0 تعليقات

إرسال تعليق

Post a Comment (0)

أحدث أقدم