ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಲಾರಿ‌ ಮತ್ತು ಬೈಕ್ ಅಪಘಾತ; ಇಬ್ಬರು ಸಾವು

ಲಾರಿ‌ ಮತ್ತು ಬೈಕ್ ಅಪಘಾತ; ಇಬ್ಬರು ಸಾವು

 


ಕಲಬುರ್ಗಿ: ಲಾರಿ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ ಘಟನೆಯೊಂದು ಜಿಲ್ಲೆಯ ಚಿಂಚೋಳಿ ತಾಲೂಕಿನ ಮಿರಿಯಾಣ ಹತ್ತಿರ ನಡೆದಿದೆ.


ರಫೀಕ್ ಸಲೀಂ (35), ಸುಮೀತ್ರಾ (41) ಮೃತಪಟ್ಟವರು.


ಮೃತರು ತೆಲಂಗಾಣ, ದ ತಾಂಡೂರ ನಿವಾಸಿಗಳು ಎಂದು ತಿಳಿದುಬಂದಿದೆ.


ಬೈಕ್ ಸವಾರರು ಚಿಂಚೋಳಿಯಿಂದ ತಾಂಡೂರ ಕಡೆಗೆ ಹೊರಟಿದ್ದರು.ಲಾರಿಯೂ ತಾಂಡೂರ ಕಡೆಯಿಂದ ಹೊರಟಿತ್ತು. ಈ ಎರಡು ವಾಹನಗಳ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವಿಗೀಡಾದ ಘಟನೆ ನಡೆದಿದೆ.


ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಿರಿಯಾಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


0 Comments

Post a Comment

Post a Comment (0)

Previous Post Next Post