ತುಮಕೂರು: ಮರ ಕಡಿಯಲು ಹೋದ ವ್ಯಕ್ತಿ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆಯೊಂದು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬಗ್ಗನಹಳ್ಳಿ ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ಹೊಸಪಾಳ್ಯ ಗ್ರಾಮದ ನಿವಾಸಿ ಲೋಕೇಶ್ (45) ಮೃತ ದುರ್ದೈವಿ.
ಲೋಕೇಶ್ ಬಗ್ಗನಹಳ್ಳಿ ಗೊಲ್ಲರಹಟ್ಟಿಯ ತೋಟವೊಂದಕ್ಕೆ ಮರ ಕಡಿಯಲು ಹೋಗಿದ್ದರು.
ಈ ವೇಳೆ ಕಾಲು ಜಾರಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Post a Comment