ಕಾಸರಗೋಡು: ಕನ್ನಡ ಹೋರಾಟ ಸಮಿತಿ ಆಶ್ರಯದಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಆಯೋಜಿಸಿರುವ ವಿಶೇಷ ಸಭೆ ಶ್ರೀ ಎಡನೀರು ಮಠದ ಆವರಣದಲ್ಲಿ ಜೂ.5ರಂದು ಜರುಗಿತು. ಗಡಿನಾಡು ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರಿಗೆ ಸಂವಿಧಾನ ಬದ್ಧವಾಗಿ ಲಭಿಸಬೇಕಾದ ಎಲ್ಲಾ ಸರಕಾರಿ ಹಕ್ಕು ಮತ್ತು ಸವಲತ್ತು ಪಡೆದುಕೊಳ್ಳಲು ನಿರಂತರ ಹೋರಾಟ ಅನಿವಾರ್ಯವಾಗಿದೆ ಎಂದು ಎಡನೀರು ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಮಹಾ ಸ್ವಾಮಿಗಳು ಹೇಳಿದರು.
ಕನ್ನಡ ಹೋರಾಟ ಸಮಿತಿ ಅಧ್ಯಕ್ಷರು ನ್ಯಾಯವಾದಿ ಮುರಳೀಧರ ಬಳ್ಳುಕ್ಕುರಾಯ ಸಭೆಯ ಅಧ್ಯಕ್ಷತೆ ವಹಿಸಿದರು. ಸಮಿತಿ ಉಪಾಧ್ಯಕ್ಷ ಎಂ. ವಿ ಮಹಾಲಿಂಗೇಶ್ವರ ಭಟ್, ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧ್ಯಕ್ಷ ಶ್ರೀನಿವಾಸ ರಾವ್, ಜಿಲ್ಲಾ ಕನ್ನಡ ಲೇಖಕರ ಸಂಘದ ಅಧ್ಯಕ್ಷ ಡಾ. ರಮಾನಂದ ಬನಾರಿ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡು ಘಟಕದ ಅಧ್ಯಕ್ಷರು ಎಸ್ ವಿ ಭಟ್, ನ್ಯಾಯವಾದಿ ಸದಾನಂದ ರೈ, ಗಮಕ ಕಲಾ ಪರಿಷತ್ತಿನ ಟಿ ಶಂಕರನಾರಾಯಣ ಭಟ್, ಕಮಲಾಕ್ಷ ಕಲ್ಲುಗೆದ್ದೆ, ಗಡಿನಾಡು ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ಅಧ್ಯಕ್ಷರು ಡಾ. ವಾಣಿಶ್ರೀ ಕಾಸರಗೋಡು, ಗುರುರಾಜ್ ಕಾಸರಗೋಡು, ಸೂರ್ಯ ಭಟ್ ಎಡನೀರು, ಜಯ ಕುಮಾರ ಡಾ. ರತ್ನಾಕರ್ ಮಲ್ಲಮೂಲೆ, ಎಂ ಎಚ್ ಜನಾರ್ದನ, ಡಾ. ಶ್ರೀಶ ಕುಮಾರ್ ಪಂಜಿತ್ತಡ್ಕ, ಧಾರ್ಮಿಕ ಮುಂದಾಳು ಗೋಪಾಲಶೆಟ್ಟಿ ಆರಿಬೈಲು, ಜಯದೇವ ಖಂಡಿಗೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಈ ಸಭೆಯಲ್ಲಿ ಡಾ. ವಾಣಿಶ್ರೀ ಕಾಸರಗೋಡು ಅವರು ಅವರ ಸಂಘದ ಪರವಾಗಿ ಆಗುತ್ತಿರುವ ಕನ್ನಡ ಪರ ಕೆಲಸಗಳನ್ನು ಸವಿವರವಾಗಿ ವಿವರಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಬಾಸ್ಕರ್ ಸ್ವಾಗತಿಸಿ ನಿರೂಪಣೆಗೈದರು.
ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘದ ಅಧ್ಯಕ್ಷ ರಾದ ಡಾ. ವಾಣಿಶ್ರೀ ಕಾಸರಗೋಡು ಗಡಿನಾಡ ಕನ್ನಡತಿ ಮಾತಾಡುತ್ತಾ ಕಾಸರಗೋಡಿನ ಕನ್ನಡಿಗರಿಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಕಾಸರಗೋಡಿನ ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸಿಕೊಡುವುದಾಗಿ ಅಲ್ಲದೆ ಕನ್ನಡದ ಆಸ್ತಿತ್ವ ವನ್ನು ಬಲ ಪಡಿಸುವ ಯಾವುದೇ ಕಾರ್ಯಗಳಿಗೆ ನಮ್ಮ ಸಂಘ ಮುಂಚೂಣಿಯಲ್ಲಿರುವುದು ಎಂದು ಸಂಘದ ಧ್ಯೇಯೋದ್ಧೇಶ ಗಳನ್ನು ತಿಳಿಸಿದರು.
إرسال تعليق