ದರ್ಮತ್ತಡ್ಕ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶ್ರೀ ದುರ್ಗಾಪರಮೇಶ್ವರಿ ಪ್ರೌಢ ಶಾಲೆ ಧರ್ಮತ್ತಡ್ಕದಲ್ಲಿ ಹಮ್ಮಿಕೊಳ್ಳಲಾಯಿತು. ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ಯೋಗ ಗುರುವಾಗಿರುವ ಪ್ರವೀಣ್ ಸೊಂಕಲ್, ಯೋಗದ ಮಹತ್ವವನ್ನು ತಿಳಿಸುತ್ತಾ "ಯೋಗದಿಂದ ರೋಗ ದೂರ, ನಮ್ಮ ದೇಹ ಹುಟ್ಟಿನಿಂದ ಸಾವಿನ ವರೆಗೆ ಸಮತೋಲನದಿಂದ ಸಾಗಲು ಯೋಗವು ಪ್ರಧಾನ ಪಾತ್ರವಹಿಸುತ್ತದೆ, ನಿತ್ಯಯೋಗಾಭ್ಯಾಸಿಗಳಾಗಿ" ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲೆಯ ವ್ಯವಸ್ಥಾಪಕ ಶ್ರೀ ಎನ್ ಶಂಕರನಾರಾಯಣ ಭಟ್ ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ- "ವಿಶ್ವಕ್ಕೆ ಯೋಗವು ಭಾರತದ ಕೊಡುಗೆಯಾಗಿದೆ, ಆಧ್ಯಾತ್ಮದೊಂದಿಗೆ ಸಮ್ಮಿಳಿತವಾದ ವಿಜ್ಞಾನವೇ ಯೋಗ" ಎಂಬ ಸಂದೇಶ ನೀಡಿದರು.
ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಧ್ಯಾಪಕ ಶ್ರೀ ರಾಮಕೃಷ್ಣ ಭಟ್ ಶುಭಾಶಂಸನೆಗೈದರು. ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು, ಶಿವನಾರಾಯಣ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು, ಶ್ರೀಮತಿ ವಿಚೇತ ಸ್ವಾಗತಿಸಿ, ಸಂತೋಷ್ ಕುಮಾರ್ ಎಂ ವಂದಿಸಿದರು.
ಬಳಿಕ ಪ್ರವೀಣ್ ಆಚಾರ್ಯ ಅವರು ವಿವಿಧ ಯೋಗಾಸನಗಳ ಪ್ರಾತ್ಯಕ್ಷಿಕೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಕೊಟ್ಟರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಧನ್ಯವಾದ
ReplyDeletePost a Comment