ಮಂಗಳೂರು: ಇತ್ತೀಚೆಗೆ ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಅವಘಡದಿಂದ ಮೃತಪಟ್ಟ ಮೀನುಗಾರರೊಬ್ಬರ ಕುಟುಂಬಕ್ಕೆ ಮೀನುಗಾರರ ಪರಿಹಾರ ನಿಧಿಯಿಂದ 6 ಲಕ್ಷ ಬಿಡುಗಡೆಗೊಂಡಿದ್ದು ಶಾಸಕ ವೇದವ್ಯಾಸ್ ಕಾಮತ್ ಅವರು ಸಂತ್ರಸ್ತ ಕುಟುಂಬಕ್ಕೆ ಚೆಕ್ ಹಸ್ತಾಂತರಿಸಿದರು.
ಕಳೆದ ಬುಧವಾರದಂದು ಬೆಂಗ್ರೆ ಸ್ಯಾಂಡ್ಸ್ ಫಿಟ್ ನಿವಾಸಿ ಜಯ ಪುತ್ರನ್ ಅಳಿವೆ ಬಾಲಿನಿನ ಬಳಿ ಬೆಳಗಿನ ಜಾವ ಬೀಸು ಬಲೆಯೊಂದಿಗೆ ಮೀಗಾರಿಕೆ ಮಾಡುತಿದ್ದ ಸಂದರ್ಭದಲ್ಲಿ ಗಾಳಿ ಮಳೆಯ ರಭಸಕ್ಕೆ ನೀರಿಗೆ ಬಿದ್ದು ಮೃತಪಟ್ಟಿದ್ದರು. ಈ ವಿಚಾರ ತಿಳಿದ ತಕ್ಷಣ ರಾಜ್ಯ ಸರಕಾರದಿಂದ ಕುಟುಂಬದ ಸದಸ್ಯರಿಗೆ ಪರಿಹಾರ ಧನ ಬಿಡುಗಡೆಗೊಳಿಸಲು ಮನವಿ ಮಾಡಿಕೊಂಡಿದ್ದೆ. ಅದರಂತೆ ರಾಜ್ಯ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ 6 ಲಕ್ಷ ಬಿಡುಗಡೆಯಾಗಿದ್ದು, ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಯಿತು ಎಂದು ಹೇಳಿದರು.
ಮೀನುಗಾರರ ಕುರಿತು ನಮ್ಮ ಸರಕಾರದ ಅವಧಿಯಲ್ಲಿ ಸಾಕಷ್ಟು ಜನೋಪಯೋಗಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಮೀನುಗಾರರ ಸಂಕಷ್ಟದ ಸಂದರ್ಭದಲ್ಲಿ ನಮ್ಮ ಆಡಳಿತ ವ್ಯವಸ್ಥೆ ತ್ವರಿತವಾಗಿ ಸಹಕಾರ ನೀಡಿದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಕಾರ್ಪೋರೇಟರ್ ಮೀರಾ ಕರ್ಕೇರ, ಬಿಜೆಪಿ ಮುಖಂಡರಾದ ಹೇಮಚಂದ್ರ ಸಾಲ್ಯಾನ್, ಲೋಕೇಶ್ ಬೆಂಗ್ರೆ, ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment