ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಡಿಜೆ ಹಳ್ಳಿಯಲ್ಲಿ ಅಗ್ನಿ ಅವಘಡ; ಹೊತ್ತಿ ಉರಿದ ದರ್ಗಾ

ಡಿಜೆ ಹಳ್ಳಿಯಲ್ಲಿ ಅಗ್ನಿ ಅವಘಡ; ಹೊತ್ತಿ ಉರಿದ ದರ್ಗಾ

 


ಬೆಂಗಳೂರು: ನಗರದ ಡಿಜೆ ಹಳ್ಳಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸಂಪೂರ್ಣ ದರ್ಗಾ ಹೊತ್ತಿ ಉರಿದಿದೆ.


ಫ್ರೇಜರ್​ ಟೌನ್ ಬಳಿಯ ಟ್ಯಾನಿ ರಸ್ತೆಯಲ್ಲಿರುವ ಮಸ್ತಾನಿ ದರ್ಗಾದಲ್ಲಿ ಇಂದು ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, ನೋಡುತ್ತಿದ್ದಂತೆ ದರ್ಗಾ ಹೊತ್ತಿ ಉರಿದಿದೆ.


ಸದ್ಯ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.


ಶಾರ್ಟ್ ಸರ್ಕ್ಯೂಟ್​​ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ.

0 Comments

Post a Comment

Post a Comment (0)

Previous Post Next Post