ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಟ್ರಕ್ ಗೆ ಕಾರು ಡಿಕ್ಕಿ; ಒಂದೇ ಕುಟುಂಬದ ಮೂವರು ಸಾವು

ಟ್ರಕ್ ಗೆ ಕಾರು ಡಿಕ್ಕಿ; ಒಂದೇ ಕುಟುಂಬದ ಮೂವರು ಸಾವು

 


ಮುಂಬೈ:  ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ನಿಂತಿದ್ದ ಕಂಟೈನರ್ ಟ್ರಕ್‍ಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಮಕ್ಕಳು ಸೇರಿ ಐವರು ಸಾವನ್ನಪ್ಪಿದ್ದಾರೆ.

ಕಾರು ಪುಣೆಯಿಂದ ಕೊಲ್ಲಾಪುರದ ಜಯಸಿಂಗ್ಪುರಕ್ಕೆ ಹೋಗುತ್ತಿದ್ದಾಗ ಸಾಂಗ್ಲಿಯ ಕಾಸೆಗಾಂವ್ ಪ್ರದೇಶದ ಯೆವಲೆವಾಡಿ ಫಾಟಾ ಪ್ರದೇಶದ ಬಳಿ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರು ಅತಿಯಾದ ವೇಗದಿಂದ ಚಲಿಸುತ್ತಿತ್ತು ಎಂದು ಹೇಳಲಾಗಿದ್ದು ಡಿಕ್ಕಿಯ ರಭಸಕ್ಕೆ ಸಂಪೂರ್ಣ ಜಖಂಗೊಂಡಿದೆ, ಅದರಲ್ಲಿದ್ದ ಎಲ್ಲಾ ಐವರು ಪ್ರಯಾಣಿಕರು ಎಲ್ಲರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಕಾಸೆಗಾಂವ್ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೃತರನ್ನು ರಿಂಜಯ್ ಶಿರೋಟೆ (35), ಮತ್ತು ಅವರ ಸಂಬಂಕರಾದ ಸ್ಮಿತಾ ಶಿರೋಟೆ (38) ಪೂರ್ವ ಶಿರೋಟೆ (14), ಸುನೇಶಾ ಶಿರೋಟೆ (10) ಮತ್ತು ವೀರು ಶಿರೋಟೆ (4) ಎಂದು ಗುರುತಿಸಲಾಗಿದೆ.

ರಿಂಜಯ್ ಶಿರೋಟೆ ತನ್ನ ಸಂಬಂಧಿಕರನ್ನು ಜಯಸಿಂಗ್ಪುರಕ್ಕೆ ಬಿಡಲು ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.


0 تعليقات

إرسال تعليق

Post a Comment (0)

أحدث أقدم