ಬೆಳಗಾವಿ: ಪೂಜೆ ಮಾಡಿ ತೀರ್ಥ ಸೇವಿಸುವಾಗ ವ್ಯಕ್ತಿ ಲೋಹದ ಕೃಷ್ಣನ ಮೂರ್ತಿ ನುಂಗಿದ್ದ ಘಟನೆಯೊಂದು ಬೆಳಗಾವಿಯಲ್ಲಿ ನಡೆದಿದೆ.
ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಶ್ರೀಕೃಷ್ಣನ ಮೂರ್ತಿಯನ್ನು ಹೊರತೆಗೆದಿದ್ದಾರೆ.
ಬೆಳಗಾವಿಯ 45 ವರ್ಷದ ವ್ಯಕ್ತಿ ಮನೆಯಲ್ಲಿ ನಿತ್ಯ ಪೂಜೆ ಮಾಡುತ್ತಿದ್ದರು. ನಂತರ ತೀರ್ಥ ಸೇವನೆ ಮಾಡುವ ವೇಳೆ ಲೋಹದ ಕೃಷ್ಣನ ಮೂರ್ತಿಯನ್ನು ನುಂಗಿದ್ದಾರೆ.
ಇದಾದ ಬಳಿಕ ವ್ಯಕ್ತಿಗೆ ಗಂಟಲು ನೋವು, ಗಂಟಲಿನಲ್ಲಿ ಊತ ಉಂಟಾಗಿ ಕೂಡಲೇ ಸ್ಥಳೀಯ ವೈದ್ಯರನ್ನು ಸಂಪರ್ಕಿಸಿದ್ದಾರೆ.
ವೈದ್ಯರ ಸಲಹೆ ಮೇರೆಗೆ ಎಕ್ಸರೇ ಮಾಡಿಸಿದರು. ಎಕ್ಸರೇ ವರದಿಯಲ್ಲಿ ಕೃಷ್ಣನ ಮೂರ್ತಿ ಗಂಟಲಿನಲ್ಲಿರುವುದು ತಿಳಿದುಬಂದಿದೆ.
ಆ ವ್ಯಕ್ತಿ ಹೆಚ್ಚಿನ ಚಿಕಿತ್ಸೆಗಾಗಿ ಕೆಎಲ್‌ಇ ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರಚಿಕಿತ್ಸೆ ಮೂಲಕ ಗಂಟಲಿನಿಂದ ಶ್ರೀಕೃಷ್ಣನ ಮೂರ್ತಿಯನ್ನು ವೈದ್ಯರು ಹೊರತೆಗೆದಿದ್ದಾರೆ.
ಇಎನ್‌ಟಿ ವಿಭಾಗದ ವೈದ್ಯೆ ಡಾ.ಪ್ರೀತಿ ಹಜಾರೆ, ಡಾ.ವಿನಿತಾ ಮೆಡಗುಡ್ಡಮಠ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
إرسال تعليق