ಮಂಗಳೂರು: ಮಂಗಳೂರಿನ ಶತಮಾನದ ಹಿನ್ನಲೆಯುಳ್ಳ ಬಲ್ಮಠ ಸರಕಾರಿ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಉಮಾಲಕ್ಷ್ಮೀ ಕೆ. ಅವರ ಬೀಳ್ಕೊಡುಗೆ ಸಮಾರಂಭವು ಶಾಲಾ ಹಳೆವಿದ್ಯಾರ್ಥಿ ಸಂಘದ ವತಿಯಿಂದ ಜರಗಿತು.
"ಕಳೆದ ಐದು ತಿಂಗಳುಗಳಿಂದ ಶಾಲಾಭಿವೃದ್ದಿಗಾಗಿ ಅಹರ್ನಿಶಿ ದುಡಿದು, 2022-23 ಸಾಲಿನ ಶೈಕ್ಷಣಿಕ ವರ್ಷದಲ್ಲಿ ಬಲ್ಮಠ ಶಾಲೆಯನ್ನು ಮಾದರಿ ಶಾಲೆಯನ್ನಾಗಿಸುವ ಸಂಕಲ್ಪ ತೊಟ್ಡಿದ್ದ ಕ್ರಿಯಾಶೀಲ ಶಿಕ್ಷಕಿ" ಎಂದು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಕದ್ರಿ ನವನೀತ ಶೆಟ್ಟಿ ಅಭಿನಂದಿಸಿದರು.
"ಪದೋನ್ನತಿ ಹೊಂದಿ ಸಾಂಡ್ಸ್ಪಿಟ್ ಬೇಂಗ್ರೆ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿ ತನ್ನ ಕರ್ತವ್ಯ ನಿರ್ವಹಿಸಲು ಹೊರಟಿದ್ದೇನೆ. ಬಲ್ಮಠ ಶಾಲೆಯ ನನ್ನ ಸೇವಾವಧಿ ಸ್ಮರಣೀಯ" ಎಂದು ಉಮಾಲಕ್ಷ್ಮಿ ಅವರು ಗೌರವ ಸ್ವೀಕರಿಸಿದರು.
ಹಳೆ ವಿದ್ಯಾರ್ಥಿ ಸಂಘದ ವಿದ್ಯಾನಿಧಿ ಪೋಷಕಿ ಶ್ರೀಮತಿ ವಿದ್ಯಾ ರಘು ಶೆಟ್ಟಿ, ಸಂಘದ ಪದಾಧಿಕಾರಿಗಳಾದ ವಸಂತಿ ಜೆ.ಪೂಜಾರಿ, ನಿರ್ಮಲಾ ಶೆಟ್ಟಿ, ನಾಗರಾಜ ರಾವ್, ವೆಂಕಟೇಶ್ ಎಂ, ಸೂರ್ಯಕಾಂತ್ ಶೇಟ್ ಉಪಸ್ಥಿತರಿದ್ದರು. ಶಿಕ್ಷಕಿ ಶಶಿಕಲಾ ಆರ್ ನಿರ್ವಹಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق