ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಭಾರತೀಯ ಪೋರ್ಟ್ ಮತ್ತು ಮಜ್ಡೂರ್ ಮಹಾಸಂಘದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ರಮೇಶ್ ಭಂಡಾರಿ ಬೊಟ್ಯಾಡಿ ಆಯ್ಕೆ

ಭಾರತೀಯ ಪೋರ್ಟ್ ಮತ್ತು ಮಜ್ಡೂರ್ ಮಹಾಸಂಘದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ರಮೇಶ್ ಭಂಡಾರಿ ಬೊಟ್ಯಾಡಿ ಆಯ್ಕೆ


ಮಂಗಳೂರು: ಭಾರತೀಯ ಮಜ್ದೂರ್ ಸಂಘದ ಸಂಸ್ಥೆಯಾದ ಭಾರತೀಯ ಪೋರ್ಟ್ ಮತ್ತು ಡಾಕ್ ಮಜ್ದೂರ್ ಮಹಾಸಂಘ ಇದರ ತ್ರೈವಾರ್ಷಿಕ ಸಮ್ಮೇಳನ ಮುಂಬೈನ ಜವಾಹರಲಾಲ್ ನೆಹರು ಪೋರ್ಟ್ ಆವರಣದಲ್ಲಿ ಏಪ್ರಿಲ್ 30 ಮತ್ತು ಮೇ 1 ರಂದು ನಡೆಯಿತು.


ಸಮ್ಮೇಳನದ ಅಧ್ಯಕ್ಷರಾಗಿ ಭವಾನಿ ಶಂಕರ್ ಡು, ಬಿ. ಎಮ್. ಎಸ್. ರಾಷ್ಟ್ರೀಯ ಉಪಾಧ್ಯಕ್ಷ ಜಗದೀಶ್ವರ್ ರಾವ್, ಪೋರ್ಟ್ ಫೆಡರೇಷನ್ ಪ್ರಭಾರಿ ಚಂದ್ರಕಾಂತ್ ಧುಮಲ್ ಮತ್ತು ದೇಶದ 9 ಪೋರ್ಟನ ಬಿಎಂಎಸ್ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸಮ್ಮೇಳನದಲ್ಲಿ ಸರಕಾರದ ಹೊಸ ಕಾರ್ಮಿಕ ನೀತಿ ಮತ್ತು ಪೋರ್ಟ್ ನಲ್ಲಿ ಕೆಲಸ ಮಾಡುತ್ತಿರುವ ಪರ್ಮನೆಂಟ್ ಮತ್ತು ಗುತ್ತಿಗೆ ಕಾರ್ಮಿಕರ ಸಮಸ್ಯೆ ಬಗ್ಗೆ ಚರ್ಚಿಸಲಾಯಿತು. ಸಮ್ಮೇಳನದಲ್ಲಿ ಹೊಸ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ಹಳ್ದಿಯ ಪೋರ್ಟ್ ನ ಶ್ರೀ ಬೀಜಲಿ, ಪ್ರಧಾನ ಕಾರ್ಯದರ್ಶಿಯಾಗಿ ಜೆ. ಎನ್.ಪಿ.ಎ.ಯ ಸುರೇಶ್ ಪಾಟೀಲ್ ಆಯ್ಕೆಯಾದರು. ನವ ಮಂಗಳೂರು ಬಂದರಿನ ಬಿಎಂಎಸ್ ಕಾರ್ಯಾಧ್ಯಕ್ಷ ರಮೇಶ್ ಭಂಡಾರಿ ಬೊಟ್ಯಾಡಿ ಯವರನ್ನು ನೂತನ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು.


ದಕ್ಷಿಣ ಕನ್ನಡ ಜಿಲ್ಲಾ ಬಿಎಂಎಸ್ ನ ಉಪಾಧ್ಯಕ್ಷ ರೋಹಿತಾಶ್ವ, ನವ ಮಂಗಳೂರು ಬಂದರಿನ ಬಿಎಂಎಸ್ ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ನಾಯ್ಕ್, ಉಪಾಧ್ಯಕ್ಸ ಸುಧಾಕರ್ ಹಾಗೂ 15 ಸದಸ್ಯರು ಸಮ್ಮೇಳನದಲ್ಲಿ  ಭಾಗವಹಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post