ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಪಘಾತದ ಗಾಯಾಳುವಿಗೆ ಯುವಶಕ್ತಿ ಸೇವಾಪಥದಿಂದ ನೆರವು

ಅಪಘಾತದ ಗಾಯಾಳುವಿಗೆ ಯುವಶಕ್ತಿ ಸೇವಾಪಥದಿಂದ ನೆರವು



ಕಲ್ಲಡ್ಕ: ಕಲ್ಲಡ್ಕದಲ್ಲಿ ರಸ್ತೆ ಅಪಘಾತಕ್ಕೆ ಒಳಗಾಗಿದ್ದ ಮೋಹನ್ ದಾಸ್ ರವರ ಚಿಕಿತ್ಸಾ ವೆಚ್ಚಕ್ಕಾಗಿ ಯುವಶಕ್ತಿ ಸೇವಾಪಥ ಹಮ್ಮಿಕೊಂಡಿದ್ದ ಸೇವಾನಿಧಿ ಯೋಜನೆ ಸಂಪನ್ನಗೊಂಡಿದೆ‌.


ಸೇವಾಪಥದ ಪೊಳಲಿ ಸೇವಾಸಿಂಧು ಯೋಜನೆಯಲ್ಲಿ ಓಂ ಶ್ರೀ ಸಾಯಿಗಣೇಶ ಸೇವಾಟ್ರಸ್ಟ್ ಮುಖಾಂತರ ಭಾಗವಹಿಸಿದ್ದ ಮೋಹನ್ ದಾಸ್ ರವರಿಗೆ ಕಲ್ಲಡ್ಕ ದಲ್ಲಿ ರಸ್ತೆ ಅಪಘಾತವಾಗಿ ಮಂಗಳೂರಿನ ಎ.ಜೆ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ಬಿಲ್ ಲಕ್ಷಾಂತರ ರೂಗಳಾಗಿದ್ದು ಬಡಕುಟುಂಬಕ್ಕೆ ಸೇವಾಪಥ ಸಾಥ್ ನೀಡಿದೆ.


ಸಹೃದಯಿ ದಾನಿಗಳಿಂದ ಮೂರು ದಿನಗಳಲ್ಲಿ 3,19,439 (ಮೂರು ಲಕ್ಷ ಹತ್ತೊಂಬತ್ತು ಸಾವಿರದ ನಾಲ್ನೂರ ಮೂವತ್ತೊಂಬತ್ತು) ಸಂಗ್ರಹಿಸಿ ನೆನ್ನೆ ಎ.ಜೆ ಆಸ್ಪತ್ರೆಯಲ್ಲಿ ಸೇವಾಪಥದ ಪ್ರಮುಖರ ಉಪಸ್ಥಿತಿಯಲ್ಲಿ ಹಸ್ತಾಂತರಿಸಿದೆ.


ಇದೀಗ ಮೋಹನ್ ದಾಸ್ ಚೇತರಿಸಿಕೊಳ್ಳುತ್ತಿದ್ದು ಸಹಕರಿಸಿದ ಸರ್ವಬಂಧುಗಳಿಗೆ ಯುವಶಕ್ತಿ ಸೇವಾಪಥ ವಂದನೆಗಳನ್ನು ಸಮರ್ಪಿಸಿದೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




0 Comments

Post a Comment

Post a Comment (0)

Previous Post Next Post