ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗುಂಪೆ ವಲಯ ಸಭೆ

ಗುಂಪೆ ವಲಯ ಸಭೆ




ಕಾಸರಗೋಡು: ಶ್ರೀಮಜ್ಜಗದ್ಗುರುಶಂಕರಾಚಾರ್ಯಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯ ಸಭೆಯು ದಿನಾಂಕ ೦3  - 05 - 2022 ಮಂಗಳವಾರ ವಲಯ ಸಂಘಟನಾ ಕಾರ್ಯದರ್ಶಿ ಉಮೇಶ್ ಜಿ.ಎನ್ ಅವರ ಗುಂಪೆ ನಿವಾಸದಲ್ಲಿ ನಡೆಯಿತು.


ಶಂಖನಾದ, ಧ್ವಜಾರೋಹಣ, ಗುರುವಂದನೆ ಗೋಸ್ತುತಿಯೊಂದಿಗೆ ಆರಂಭವಾದ ಸಭೆಯ ಅಧ್ಯಕ್ಷತೆಯನ್ನು  ವಲಯಾಧ್ಯಕ್ಷರಾದ ಬಿ.ಎಲ್. ಶಂಭು ಹೆಬ್ಬಾರ್ ವಹಿಸಿದರು. ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ ಗತಸಭೆಯ ವರದಿ ಮತ್ತು ಮಹಾಮಂಡಲ ಸುತ್ತೋಲೆಯನ್ನು ವಾಚಿಸಿದರು.


ಸೇವಾಸೌಧದ ನಿರ್ಮಾಣದ ಮಾಹಿತಿಯನ್ನು ನೀಡಲಾಯಿತು. ಬಾನ್ಕುಳಿಯಲ್ಲಿ ನಡೆಯುವ ಶ್ರೀ ಶಂಕರಪಂಚಮಿ ಕಾರ್ಯಕ್ರಮದ ವಿವರ, ಗೋಸ್ವರ್ಗದಲ್ಲಿ ನಡೆಯುವ ಭಜನಾ ಕಾರ್ಯಕ್ರಮ ಹಾಗೂ ಮಾತೃ ಸಮಾವೇಶದ ಬಗ್ಗೆ ಮಾಹಿತಿ ನೀಡಿದರು. ಕೋಶಾಧ್ಯಕ್ಷರಾದ ರಾಜಗೋಪಾಲ ಭಟ್ ಅಮ್ಮಂಕಲ್ಲು ಲೆಕ್ಕಪತ್ರ ಮಂಡಿಸಿದರು. ಮಾತೃ ಪ್ರಧಾನೆ ಲಲಿತಾ ಮಾಣಿ  ಶಿವಮಾನಸ ಪೂಜಾ ಸ್ತೋತ್ರ ಪಠಣ, ಕುಂಕುಮಾರ್ಚನೆಗಳ ಮಾಹಿತಿಯನ್ನಿತ್ತರು.


ವೈದಿಕ ಪ್ರಧಾನರಾದ ಸುಬ್ರಹ್ಮಣ್ಯ ಭಟ್ ಬೆಜಪ್ಪೆ ವಲಯದಲ್ಲಿ ನಡೆಸಿದ ಶ್ರೀರುದ್ರ ಪಾರಾಯಣ, ಶ್ರೀರಾಮತಾರಕ ಜಪ, ಶ್ರೀಗಾಯತ್ರಿ ಜಪದ ವಿವರಗಳನ್ನು ನೀಡಿದರು. ಸಭಾಧ್ಯಕ್ಷರು ಮಾತನಾಡಿ ವಲಯದಲ್ಲಿ ಮುಷ್ಟಿ ಭಿಕ್ಷೆ, ಧರ್ಮಭಾರತೀ ಚಂದಾಗಳನ್ನು ಇನ್ನಷ್ಟು ಸಕ್ರಿಯಗೊಳಿಸಬೇಕೆಂದು ವಿನಂತಿಸಿದರು.


ಇತ್ತೀಚೆಗೆ ನಿಧನರಾದ ಪಾರ್ವತಿ ಅಮ್ಮಂಕಲ್ಲು (ನಿಕಟಪೂರ್ವ ವಲಯಾಧ್ಯಕ್ಷರಾದ ರಾಮ ಭಟ್ ಅಮ್ಮಂಕಲ್ಲು ಅವರ ಪತ್ನಿ) ಅವರ ಆತ್ಮಕ್ಕೆ ಸದ್ಗತಿ ಕೋರಿ ಶ್ರೀರಾಮ ತಾರಕ ಜಪ ಪಠಿಸಲಾಯಿತು. ಶಾಂತಿ ಮಂತ್ರ ಗೋಸ್ತುತಿಯೊಂದಿಗೆ ಸಭೆ ಮುಕ್ತಾಯವಾಯಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post