ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಂಬ್ಳ ವಾರ್ಡ್‌: ಕಿರು ಸೇತುವೆ ಕಾಮಗಾರಿಗೆ ಶಾಸಕ ಕಾಮತ್ ಭೂಮಿಪೂಜೆ

ಕಂಬ್ಳ ವಾರ್ಡ್‌: ಕಿರು ಸೇತುವೆ ಕಾಮಗಾರಿಗೆ ಶಾಸಕ ಕಾಮತ್ ಭೂಮಿಪೂಜೆ


ಮಂಗಳೂರು: ಮಹಾನಗರ ಪಾಲಿಕೆಯ ಕಂಬ್ಳ‌ ವಾರ್ಡಿನ ಜನತಾ ಡಿಲೆಕ್ಸ್ ಹೋಟೆಲ್ ರಸ್ತೆಯಲ್ಲಿ ಕಿರು ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು. 


ಆ ಬಳಿಕ ಮಾತನಾಡಿದ ಅವರು, ಜನತಾ ಡಿಲೆಕ್ಸ್ ಹೋಟೆಲ್ ಬಳಿಯಿರುವ ರಾಜಕಾಲುವೆಯ ಅಭಿವೃದ್ಧಿ, ರಸ್ತೆ ಅಭಿವೃದ್ಧಿ ಹಾಗೂ ಒಳಚರಂಡಿ ವ್ಯವಸ್ಥೆ ಪುನರ್ ನಿರ್ಮಾಣ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಹಾಗೆಯೇ ಈ ಪರಿಸರದಲ್ಲಿ ಕಿರು ಸೇತುವೆ ನಿರ್ಮಾಣಕ್ಕೂ ಕೂಡ ಅನುದಾನ ಬಿಡುಗಡೆಗೊಳಿಸಿದ್ದು, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಎಂದರು‌.


ಪ್ರಮುಖವಾಗಿ ಮಳೆಗಾಲದ ಸಂದರ್ಭದಲ್ಲಿ ರಾಜಕಾಲುವೆಯಿಂದ ಮಳೆನೀರು ಮನೆಗಳಿಗೆ ನುಗ್ಗುವ ಸಮಸ್ಯೆಯಿದ್ದು ಅದನ್ನು ಸರಿಪಡಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಒಳಚರಂಡಿ ಜಾಲ ಪುನರ್ ನಿರ್ಮಾಣದ ಕಾಮಗಾರಿ ಸಂಪೂರ್ಣಗೊಂಡ ಬಳಿಕ ರಸ್ತೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.


ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಸ್ಥಳೀಯ ಕಾರ್ಪೋರೇಟರ್ ಲೀಲಾವತಿ ಪ್ರಕಾಶ್, ಕಾರ್ಪೊರೇಟರ್ ಸಂಧ್ಯಾ ಆಚಾರ್ಯ, ಬಿಜೆಪಿ ಮುಖಂಡರಾದ ರಮೇಶ್ ಹೆಗ್ಡೆ, ವಸಂತ್ ಜೆ ಪೂಜಾರಿ, ರಕ್ಷಿತ್ ಕೊಟ್ಟಾರಿ, ಜಯರಾಜ್ ಕೊಟ್ಟಾರಿ, ಪ್ರಕಾಶ್ ಸಾಲ್ಯಾನ್, ನೀಲೇಶ್ ಕಾಮತ್, ಪರಿಸರದ ನಿವಾಸಿಗಳಾದ ಮುನಿಯಲ್ ದಾಮೋದರ್ ಆಚಾರ್ಯ,ವಿಠ್ಠಲ್ ಶೆಟ್ಟಿ,ಸಚಿನ್, ನಿರ್ಮಲ, ಸರಳ, ಪ್ರಕಾಶ್  ಕೊಡಿಯಲ್ ಬೈಲ್,ಜಯರಾಜ್ ರೈ, ಪಾಲಿಕೆಯ ಅಧಿಕಾರಿಗಳು ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post