ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿಯೊ ಗೊತ್ತಿಲ್ಲ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮಾಹಿತಿ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ; ಆದರೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಮುಖವಾಗಿ ಮೂರು ಸ್ಟ್ರೀಮ್ ಗಳನ್ನು ಸಾಮಾನ್ಯವಾಗಿ ಕಾಣಬಹುದು. ಆದರೆ ಕಲಾ ವಿಷಯ ಅತೀ ಹೆಚ್ಚು ಕಡೆಗಣಿಸಲ್ಪಟ್ಟ ಪ್ರದೇಶವೆಂದರೆ ಕರಾವಳಿ ಜಿಲ್ಲೆ. ಇದಕ್ಕೆ ಬಹುಮುಖ್ಯ ಕಾರಣ ನಮ್ಮ ಶಿಕ್ಷಣ ಪದ್ಧತಿ ಹೆಚ್ಚು ಕಾರ್ಪೊರೇಟ್ ಜಗತ್ತಿನ ಕಡೆ ಮುಖ ಮಾಡುತ್ತಿರುವುದು ಒಂದು ಕಾರಣ. ಜಾಹಿರಾತು ಪ್ರಪಂಚದಲ್ಲಿ ಕಲಾ ವಿಷಯ ಹೆಚ್ಚು ಕಡೆಗಣಿಸಲ್ಪಟ್ಟ ವಿಷಯಯೂ ಹೌದು. ಶಿಕ್ಷಣ ಸಂಸ್ಥೆಯನ್ನು ನಡೆಸುವ ವರು ಕೂಡ ಹೆಚ್ಚು ಬೇಡಿಕೆ. ಹಣಕಾಸು ಹರಿದು ಬರುವ ಕೇೂಸು೯ಗಳಿಗೆ ಹೆಚ್ಚು ಆದ್ಯತೆ ನೀಡುತ್ತಾ ಬಂದಿರುವುದು ಇನ್ನೊಂದು ಕಾರಣ. ವಿಜ್ಞಾನ ವಾಣಿಜ್ಯ ಅಂದಾಗ ಅದಕ್ಕೆ ಒಂದಿಷ್ಟು ವಿವಿಧ ರೀತಿಯ ಕೇೂಚಿಂಗ್. ಅದು ಕೂಡ ಅತೀ ದೊಡ್ಡ ವ್ಯವಹಾರಿಕ ಕೇಂದ್ರ ಅದಕ್ಕೂ ಒಂದಿಷ್ಟು ಪಬ್ಲಿಸಿಟಿ. ಇದು ಮಾಧ್ಯಮಗಳಿಗೂ ಒಂದಿಷ್ಟು ಆಹಾರ ಒದಗಿಸುತ್ತದೆ. ಹಾಗಾಗಿ ಅದಕ್ಕೆ ಪೂರಕವಾದ ಮಾಹಿತಿ ನಡೆಸುವುದು ಸಾಮಾನ್ಯ.
ಶೈಕ್ಷಣಿಕ ಮಾಹಿತಿ ಕಾರ್ಯಾಗಾರ ನಡೆಸುವವರಲ್ಲಿ ನನ್ನ ವಿಜ್ಞಾಪನೆ ಅಂದರೆ ಕಲಾ ವಿಷಯಕ್ಕೂ ಆದ್ಯತೆ ನೀಡಿ. ಈ ಕ್ಷೇತ್ರದಲ್ಲಿ ಪರಿಣಿತ ಸಾಧಕರನ್ನು ವಿಷಯ ತಜ್ಞರನ್ನು ಒಗ್ಗೂಡಿಸಿ ಇಂತಹ ಕಾರ್ಯಕ್ರಮ ನಡೆಸಿದರೆ ಅದು ಎಲ್ಲಾ ವಗ೯ದ ವಿದ್ಯಾರ್ಥಿಗಳಿಗೂ ಪ್ರಯೇೂಜನ.
ಕಲಾ ವಿಷಯ ಸೇೂತಿಲ್ಲ..ಬದಲಾಗಿ ಕಲಾ ಮನಸ್ಸುಗಳು ಸೇೂತಿದ್ದಾವೆ. ಅದೆಷ್ಟೋ ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳು ಕಲಾ ವಿಷಯವನ್ನು ಆಯ್ಕೆ ಮಾಡಿಕೊಂಡು ಉನ್ನತವಾದ ಹುದ್ದೆ ಯನ್ನು ಆಲಂಕಾರಿಸಿರುವ ಅನೇಕ ಉದಾಹರಣೆ ನಮ್ಮ ಮುಂದಿದೆ.
ನಮ್ಮ ಕಲಾ ವಿಷಯಗಳ ಬೇೂಧನಾ ಕ್ರಮದಲ್ಲಿ ಸಾಕಷ್ಟು ಸುಧಾರಣೆ ಮಾಡಬೇಕಾಗಿದೆ ಅನ್ನುವುದು ಅಷ್ಟೇ ಸತ್ಯ. ಇಂದು ಐ.ಎ.ಎಸ್.ನಂತಹ ಪರೀಕ್ಷೆಗಳಿಗೆ ಕಲಾ ವಿಷಯ ಪೂರಕ ಅನ್ನುತ್ತೇವೆ. .ಜೊತೆಗೆ ಇಂದು ಹೆಚ್ಚಿನ ಸಂಖ್ಯೆಯ ಇಂಜಿನಿಯರಿಂಗ್ ಪದವೀಧರರು ಇಂತಹ ಸ್ಪಧಾ೯ತ್ಮಕ ಪರೀಕ್ಷೆ ಪಾಸು ಮಾಡುತ್ತಾರೆ ಅನ್ನುತ್ತೇವೆ. ಆದರೆ ಈ ಸ್ಪಧಾ೯ತ್ಮಕ ಪರೀಕ್ಷೆ ಯಲ್ಲಿ ಇಂಜಿನಿಯರಿಂಗ್ ಓದಿದ ಅಭ್ಯರ್ಥಿಗಳು ಇಂತಹ ಪರೀಕ್ಷೆಯಲ್ಲಿ ಆಯ್ಕೆ ಮಾಡಿಕೊಳ್ಳುವ ವಿಷಯ ಮಾನವಿಕ ಶಾಸ್ತ್ರದ ವಿಷಯಗಳು ಅನ್ನುವುದನ್ಮು ನಾವು ನೆನಪಿಸಲೇಬೇಕು. ಹಾಗಾಗಿ ನಮ್ಮ ಕಲಾ ವಿಷಯದ ಆಯ್ಕೆ ನಮ್ಮ ಕೊನೆಯ ಬಸ್ ಆಗ ಬಾರದು. ಅದೆಷ್ಟೊ ಮಂದಿ ವಿದ್ಯಾರ್ಥಿಗಳು ಮನೆಯವರ ಸ್ನೇಹಿತರ ಪ್ರಭಾವಕ್ಕೆ ಒಳಗಾಗಿ ಸೈನ್ಸ್ ತೆಗೆದುಕೊಂಡು ಫೇಲಾಗಿ ಕೊನೆಗೂ ಆಟ್ಸ್೯ ಆಯ್ಕೆ ಮಾಡಿಕೊಂಡು ಉನ್ನತವಾದ ಸಾಧನೆ ಮಾಡಿದ ನಿದರ್ಶನ ನಮ್ಮ ಮುಂದಿದೆ. ಹಾಗಾಗಿ ಕಲಾ ವಿಷಯದ ಕುರಿತು ಮಾಹಿತಿ ನೀಡುವುದಕ್ಕೆ ಯಾವುದೇ ಉದಾಸೀನ ತೇೂರಿಸ ಬೇಡಿ ಅನ್ನುವುದು ನಮ್ಮ ಕಲಾ ಮನಸ್ಸುಗಳ ಪ್ರಾಥ೯ನೆಯೂ ಹೌದು.
-ಪ್ರೊ. ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق