ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಾಟರ್ ಟ್ಯಾಂಕರ್ ಹರಿದು ಮೂರು ವರ್ಷದ ಬಾಲಕ ಸಾವು

ವಾಟರ್ ಟ್ಯಾಂಕರ್ ಹರಿದು ಮೂರು ವರ್ಷದ ಬಾಲಕ ಸಾವು

 


ಬೆಂಗಳೂರು: ವಾಟರ್ ಟ್ಯಾಂಕರ್ ಹರಿದು ಮೂರು ವರ್ಷದ ಬಾಲಕ ಸಾವನ್ನಪ್ಪಿದ ಘಟನೆಯೊಂದು ಬೆಂಗಳೂರು ಹೊರ ವಲಯದ ಸರ್ಜಾಪುರ ರೋಡಿನ ಸೆರಿನಿಟಿ ಲೇಔಟ್ ನಲ್ಲಿ ನಡೆದಿದೆ.


 ಮೂರು ವರ್ಷದ ಪ್ರತಿಷ್ಠಾ ಎಂಬ ಪುಟ್ಟ ಬಾಲಕ ಸಾವನ್ನಪ್ಪಿದ ಮಗು ಎಂದು ಗುರುತಿಸಲಾಗಿದೆ.


ಅಪಾರ್ಟ್ಮೆಂಟ್ ಗೆ ತಂದಿದ್ದ ನೀರು ಅನ್ ಲೋಡ್ ಮಾಡಿ ರಿವರ್ಸ್ ತೆಗೆಯುವ ವೇಳೆ ಚಾಲಕ ಹಿಂದೆ ನೋಡದೇ ಚಕ್ರದಡಿ ಸಿಲುಕಿರುವ ಬಾಲಕನ ಮೇಲೆ ಟ್ಯಾಂಕರ್ ಹರಿಸಿದ ಪರಿಣಾಮ, ಸ್ಥಳದಲ್ಲೇ ತೀವ್ರ ರಕ್ತಸ್ರಾವವಾಗಿ ಮಗು ಮೃತಪಟ್ಟಿದೆ.


 ಶ್ವೇತ ರೆಸಿಡೆನ್ಸಿ ಅಪಾರ್ಟ್ಮೆಂಟ್ ಮುಂದೆ ಈ ಅವಘಡ ಸಂಭವಿಸಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.


  ಹೆಚ್‌ಎಸ್ ಆರ್ ಲೇಔಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

0 تعليقات

إرسال تعليق

Post a Comment (0)

أحدث أقدم