ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬೆಂಗಾಲಿ ನಟಿ ಶವ ಅಪಾರ್ಟ್ ಮೆಂಟ್ ನಲ್ಲಿ ಪತ್ತೆ

ಬೆಂಗಾಲಿ ನಟಿ ಶವ ಅಪಾರ್ಟ್ ಮೆಂಟ್ ನಲ್ಲಿ ಪತ್ತೆ

 


ಕೋಲ್ಕತ್ತಾ: ಬೆಂಗಾಲಿ ರೂಪದರ್ಶಿ ಹಾಗೂ ಕಿರುತೆರೆ ನಟಿ ಬಿದಿಶಾ ಡೆ ಮಂಜುಂದಾರ್ ಶವ ಕೋಲ್ಕತಾದ ದಮ್ ದಮ್ ನಗರದ ಅಪಾರ್ಟ್ ಮೆಂಟ್ ನಲ್ಲಿ ಪತ್ತೆಯಾಗಿದೆ.

ನಾಲ್ಕು ತಿಂಗಳ ಹಿಂದೆ ಅಪಾರ್ಟ್ ಮೆಂಟ್ ನ ಮೊದಲ ಮಹಡಿಯ ಫ್ಲ್ಯಾಟ್ ನಲ್ಲಿ ಬಾಡಿಗೆಗೆ ಇದ್ದ ನಟಿ ಬುಧವಾರ ರಾತ್ರಿ ಶವವಾಗಿ ಪತ್ತೆಯಾಗಿದ್ದು, ಡೆತ್ ನೋಟ್ ಪತ್ತೆಯಾಗಿದ್ದರಿಂದ ಇದು ಆತ್ಮಹತ್ಯೆ ಎಂದು ಶಂಕಿಸಲಾಗಿದೆ.

ಬಾಗಿಲು ಒಡೆದು ಮನೆಯೊಳಗೆ ಪೊಲೀಸರು ಹೋದಾಗ ನಟಿ ಬಿದಿಶಾ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಅನುಭವ್ ಮೆಹ್ರಾ ಎಂಬಾತ ಈ ನಟಿಯ ಬಾಯ್ ಫ್ರೆಂಡ್ ಆಗಿದ್ದು, ಈತನ ಸ್ನೇಹ ಬೆಳೆಸಿದ ನಂತರ ಬಿದಿಶಾ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಳು ಎಂದು ಆಕೆಯ ಸ್ನೇಹಿತರು ಆರೋಪಿಸಿದ್ದಾರೆ.


0 Comments

Post a Comment

Post a Comment (0)

Previous Post Next Post