ದಾವಣಗೆರೆ: ಕೆಟಿಜೆ ನಗರದ ಪರಶುರಾಂ (36) ಮೃತ ದುರ್ದೈವಿ. ಇಲ್ಲಿನ ಕೆಟಿಜೆ ನಗರ 13ನೇ ಕ್ರಾಸ್, 3ನೇ ಮುಖ್ಯ ರಸ್ತೆಯಲ್ಲಿರುವ ಸೈಯದ್ ಪೀರ್ ಎಂಬವರ ಮನೆಯ ಮೇಲೆ ಇದ್ದ ಅಲ್ಯುಮಿನಿಯಂ ಪೋಲ್ಗಳನ್ನು ಇಬ್ಬರು ಕಳವು ಮಾಡಲು ಮಂಗಳವಾರ ರಾತ್ರಿ ಯತ್ನಿಸುತ್ತಿದ್ದರು.
ಈ ವೇಳೆ ಮನೆ ಮಾಲೀಕರು ಎಚ್ಚರಗೊಂಡು ಕಳ್ಳ ಕಳ್ಳ ಎಂದು ಕೂಗಿದ್ದಾರೆ.
ಹೆದರಿದ ಆರೋಪಿಗಳು ಪರಾರಿಯಾಗುವ ಅವಸರದಲ್ಲಿ ಪರಶುರಾಂ ಕೆಳಗೆ ಬಿದ್ದಿದ್ದು, ತಲೆಗೆ ತೀವ್ರ ಪೆಟ್ಟಾಗಿದೆ.
ಆಸ್ಪತ್ರೆಗೆ ಸಾಗಿಸುವಾಗ ಆತ ಮೃತಪಟ್ಟಿದ್ದಾನೆ. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಟಿಜೆನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a Comment