ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಿರುತೆರೆ ಚಲನಚಿತ್ರ ನಿರ್ದೇಶಕ ಕೆ.ಎನ್.ಮೋಹನ್ ನಿಧನ

ಕಿರುತೆರೆ ಚಲನಚಿತ್ರ ನಿರ್ದೇಶಕ ಕೆ.ಎನ್.ಮೋಹನ್ ನಿಧನ

 


ಬೆಂಗಳೂರು: ಕಿರುತೆರೆ, ಚಲನಚಿತ್ರ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಕೆ.ಎನ್ ಮೋಹನ್ ಅವರು, ಹೃದಯಾಘಾತದಿಂದ ಸೋಮವಾರ ನಿಧನರಾಗಿದ್ದಾರೆ.


ಬೆಂಗಳೂರಿನ ಎನ್ ಆರ್ ಕಾಲೋನಿಯ ರಾಮಲೀಲಾ ಅಪಾರ್ಮೆಂಟ್ ನಲ್ಲಿ ವಾಸವಾಗಿದ್ದ ಅವರು, ಸ್ನಾನದ ಕೋಣೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ತೀವ್ರವಾಗಿ ಅಸ್ವಸ್ಥರಾಗಿದ್ದರು.


ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆಯಲ್ಲಿ ದಾರಿ ಮಧ್ಯೆ ಕೊನೆಯುಸಿರು ಎಳೆದಿದ್ದಾರೆ.


ಮೃತ ಮೋಹನ್ ಕುಮಾರ್ ಖ್ಯಾತ ನಿರೂಪಕಿ ಹಾಗೂ ನಟಿ ವತ್ಸಲಾ ಮೋಹನ್ ಅವರ ಪತಿ. .


ಮೃತ ಮೋಹನ್ ಕುಮಾರ್ ಅಂತ್ಯಕ್ರಿಯೆ ಆನೇಕಲ್ ತಾಲೂಕಿನ ಸಮಂದೂರಿನಲ್ಲಿ ನೆರವೇರಲಿದೆ.


0 Comments

Post a Comment

Post a Comment (0)

Previous Post Next Post