ಬೆಂಗಳೂರು : ಕೈ ಸರ್ಜರಿಗೆ ಹೋಗಿದ್ದ ವಿದ್ಯಾರ್ಥಿ ಯ ಪ್ರಾಣವೇ ಹೋಗಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆ ವಿರುದ್ಧ ಪೋಷಕರ ಆಕ್ರೋಶ ವ್ಯಕ್ತಪಡಿಸಿದರು.
21 ವರ್ಷದ ತೇಜಸ್ವಿನಿ ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದಾಳೆ.
ಮಾರತಹಳ್ಳಿ ಜೀವಿಕಾ ಆಸ್ಪತ್ರೆ ವಿರುದ್ಧ ಪೋಷಕರು ಆಕ್ರೋಶ ಹೊರಹಾಕುತ್ತಿದ್ದಾರೆ. ತೇಜಸ್ವಿನಿ ಮೂಲತಃ ಬಾಗೇಪಲ್ಲಿ ತಾಲೂಕಿನವರು.
ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಳು. ತೇಜಸ್ವಿನಿ ಪಿಜಿಯೊಂದರಲ್ಲಿ ಉಳಿದುಕೊಂಡಿದ್ದಳು. ನಿನ್ನೆ ಬಾತ್ ರೂಮಿನಲ್ಲಿ ಬಿದ್ದು ಕೈಗೆ ಗಾಯಗಳಾಗಿದ್ದವು.
ಇದರಿಂದಾಗಿ ಮುಂಗೈ ಶಸ್ತ್ರಚಿಕಿತ್ಸೆಗಾಗಿ ಜೀವಿಕಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಸ್ತ್ರಚಿಕಿತ್ಸೆ ನಡೆದ ಕೆಲವೇ ಗಂಟೆಗಳಲ್ಲಿ ತೇಜಸ್ವಿನಿ ಮೃತಪಟ್ಟಿದ್ದಾಳೆ.
ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ತೇಜಸ್ವಿನಿ ಸಾವನ್ನಪ್ಪಿದ್ದಾಳೆ ಎಂದು ಆರೋಪ ಮಾಡಿದ್ದಾರೆ.
ತೇಜಸ್ವಿನಿ ಬೆಳಗ್ಗೆ 4ಕ್ಕೆ ದಾಖಲಾಗಿದ್ದು, ಮಧ್ಯಾಹ್ನ 12ಕ್ಕೆ ಸರ್ಜರಿ ಸಂಜೆ 4 ಗಂಟೆಗೆ ಸಾವನ್ನಪ್ಪಿದ್ದಾಳೆ.
ಅನಸ್ತೇಷಿಯಾ ನೀಡಿದ್ದ ಡಾಕ್ಟರ್ ಶಶಾಂಕ್, ಡಾ.ಅಶೋಕ್ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ.
HAL ಪೊಲೀಸರು ಡಾಕ್ಟರ್ ಶಶಾಂಕ್ರನ್ನು ವಶಕ್ಕೆ ಪಡೆದಿದ್ದಾರೆ.
Post a Comment