ಉಡುಪಿ: ಉಡುಪಿಯ ಅಂಬಲಪಾಡಿ ಶ್ರೀ ಜನಾರ್ಧನ ಶ್ರೀ ಮಹಾಂಕಾಳಿ ದೇವಸ್ಥಾನ ವಠಾರದ ಶ್ರೀ ಭವಾನಿ ಸಭಾ ಮಂಟಪದಲ್ಲಿ ಇಂದು ಬೆಳಿಗ್ಗೆ 8.45 ರಿಂದ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಹುಬ್ಬಳ್ಳಿ ಕೇಂದ್ರ ಘಟಕ ಹಾಗೂ ತುಳು ಅಕಾಡಮಿ ಮಂಗಳೂರು ಇದರ ಸಹಕಾರದಿಂದ ಡಾ. ವಾಣಿಶ್ರೀ ಕಾಸರಗೋಡು ಗಡಿನಾಡ ಕನ್ನಡತಿ ಇವರ ನೇತ್ರತ್ವದಲ್ಲಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಇದರ ವತಿಯಿಂದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ನಡೆಯಿತು.
ಈ ಕಾರ್ಯಕ್ರಮದಲ್ಲಿ ಗಡಿನಾಡ ಸಂಘದ ಉಡುಪಿಯ ಕಲಾವಿದರಾದ ಭಾಗ್ಯಲಕ್ಷ್ಮಿ ಎಸ್ ಧನ್ಯ, ಅಕ್ಷತಾ ಪಿ ಅಡಿಗ, ಸುಧಾ ಜಿ ಉಪಾಧ್ಯ, ಪುಷ್ಪ ಎಸ್ ವೈದ್ಯ, ಅನರ್ಘ್ಯ ಜಿ ಉಪಾಧ್ಯ, ಸವಿತ ಆರ್ ಭಟ್, ಎಂ. ಎಸ್ ಶ್ರೀಲತಾ ಹೆಬ್ಬಾರ್, ಅನನ್ಯ ಜಿ ಉಪಾಧ್ಯ, ಪ್ರಜ್ಞಾ ಆರ್ ಹೆಬ್ಬಾರ್, ಭೂಮಿಕಾ ಉಡುಪ, ನಿವೇದಿತಾ ಕುಂಬಾಶಿ, ಮೇಘನಾ ಐತಾಳ್, ಅಶ್ವಿನಿ ಐತಾಳ್, ಪಾವನ ಐತಾಳ್ ಹಾಗೂ ಮೊದಲಾದವರು ಗಾನ, ನಾಟ್ಯ, ವೈಭವವನ್ನು ಪ್ರದರ್ಶಿಸಿದರು.
ಡಾ. ವಾಣಿಶ್ರೀ ಕಾಸರಗೋಡು ಇವರು ಮಾತನಾಡುತ್ತಾ ದೇಶದ ಏಳಿಗೆಗೆ ಧಕ್ಕೆ ಬಾರದಂತೆ ಎಲ್ಲರೂ ಸೌಹಾರ್ದತೆಯಿಂದ ಬದುಕುವ ಅವಶ್ಯಕತೆಯಿದೆ. ಹಾಗಾಗಿ ಭಾಷಾ ಸಾಮರಸ್ಯವಿರಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಪ್ರೊ. ಚಿತ್ರಪ್ಪಾಡಿ ಉಪೇಂದ್ರ ಸೋಮಯಾಜಿ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಹುಬ್ಬಳ್ಳಿ ಕೇಂದ್ರ ಸಮಿತಿ ಸಂಚಾಲಕರಾದ ಕೃಷ್ಣಮೂರ್ತಿ ಕುಲಕರ್ಣಿ, ಜಿಲ್ಲಾಧ್ಯಕ್ಷರಾದ ಜಿ ಯು ನಾಯಕ್, ಉಪಾಧ್ಯಕ್ಷರಾದ ರಾಜೀವ್ ಎನ್ ಆಚಾರ್ಯ ಹಾಗೂ ಜಿಲ್ಲಾ ಕಾರ್ಯದರ್ಶಿ ಹಂದಕುಂದ ಸೋಮಶೇಖರ್ ಶೆಟ್ಟಿ ಉಪಸ್ಥಿತರಿದ್ದರು. ಭಾಗವಹಿಸಿದ ಎಲ್ಲಾ ಕಲಾವಿದರಿಗೂ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಹುಬ್ಬಳ್ಳಿ ಇವರ ವತಿಯಿಂದ ಅಭಿನಂದನಾ ಪತ್ರ ಹಾಗೂ ಪುಸ್ತಕ ನೀಡಿ ಗೌರವಿಸಲಾಯಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಕಾರ್ಯಕ್ರಮದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಹುಬ್ಬಳ್ಳಿ ಕೇಂದ್ರ ಘಟಕ ಇದರ ಕೇರಳ ರಾಜ್ಯಾಧ್ಯಕ್ಷರು ಆದ ಡಾ. ವಾಣಿಶ್ರೀ ಕಾಸರಗೋಡು ಇವರು ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರಗೋಷ್ಠಿ ಹಾಗೂ ಕವಿಗೋಷ್ಠಿಯ ಸಂಪೂರ್ಣ ನಿರೂಪಣೆ ಮಾಡಿದರು. ಗುರುರಾಜ್ ಕಾಸರಗೋಡು ಇವರು ಧನ್ಯವಾದ ಸಮರ್ಪಣೆ ಮಾಡಿದರು.
Post a Comment