ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಭಿಮತ: ಇಂಥವರೆಲ್ಲ ಪ್ರಗತಿಪರರಂತೆ...!

ಅಭಿಮತ: ಇಂಥವರೆಲ್ಲ ಪ್ರಗತಿಪರರಂತೆ...!



ಭಾರತದಲ್ಲಿ "ತಾವು ಎಡಪಂಥೀಯರು, ಪ್ರಗತಿಪರರು" ಎಂದು ತಮ್ಮನ್ನು ತಾವೇ ಹೆಸರಿಸಿಕೊಳ್ಳುವವರಿಗೂ ಮತ್ತು ವಸೂಲಿಕೋರ ಗೂಂಡಾಗೂ ವ್ಯತ್ಯಾಸ ಏನು!?! 


ಹಿಂದೆ ಉಡುಪಿಯಲ್ಲಿ ಓರ್ವ ಗೂಂಡಾ ಆಗಿಹೋಗಿದ್ದ. "ಕಾರಂತರು ವಿಶ್ವಕರ್ಮ ಸಮುದಾಯದವರಿಗೆ ಅಪಮಾನ ಮಾಡಿದ್ದಾರೆ. ಅವರು ಕ್ಷಮೆಯಾಚಿಸಬೇಕು" ಎಂಬ ಪುಕಾರು ಹುಟ್ಟಿಸಿ ಸಾವಿರಾರು ಜನರನ್ನು ಸೇರಿಸಿಕೊಂಡು ಕಾರಂತರ ಮನೆಗೆ ದಾಳಿ ನಡೆಸಿದ್ದ. ಆ ಸಾವಿರಾರು ಜನರಲ್ಲಿ ಒಬ್ಬರೂ ಕಾರಂತರು ಬರೆದದ್ದನ್ನು ಓದಿರಲಿಲ್ಲ ಎಂಬುದು ನಿಸ್ಸಂಶಯ. ಏಕೆಂದರೆ ಕಾರಂತರು ಆ ಬಡಗಿಯ ಕಷ್ಟಜೀವನ, ಬಡತನವನ್ನು, ಪ್ರಾವೀಣ್ಯವನ್ನು, ಸಜ್ಜನಿಕೆಯನ್ನು ಹೇಳಿ ಕೊನೆಯಲ್ಲಿ 'ಇಷ್ಟೆಲ್ಲಾ ಅವನಿಂದ ಮಾಡಿಸಿಕೊಂಡ ಜನ ಮಾತ್ರ ಅವನನ್ನು ಲಟಪಟ ಆಚಾರಿ ಎನ್ನುತ್ತಾರೆ' ಎಂದು ಬರೆದರು. ಜನ ಯಾವತ್ತಿಗೂ ಕುರಿಗಳೇ! ಆ ಓದಲು ಬಾರದ ಗೂಂಡಾ ಓದಿ ಹೇಳಿದ್ದನ್ನೇ ನಂಬಿ ಎಲ್ಲರೂ ಸಾಲಿಗ್ರಾಮಕ್ಕೆ ಮೆರವಣಿಗೆಯಲ್ಲಿ ಸಾಗಿದರು! ಕೊನೆಗೂ ಆ ಗೂಂಡಾ ಗೂಂಡಾಗಳ ಗುಂಡೇಟಿಗೆ ಬಲಿಬಿದ್ದರು. 


ರೋಹಿತ್ ಚಕ್ರತೀರ್ಥ ಯಾರೋ ಹೇಳಿದ್ದನ್ನು ಉದ್ಧರಿಸಿ ಹೇಳಿದ್ದನ್ನು ತಮಗೆ ಬೇಕಾದಂತೆ ಕತ್ತರಿಸಿ ಈ ತಥಾಕಥಿತ ಬುದ್ಧಿಜೀವಿ-ಎಡಪಂಥೀಯ-ಪ್ರಗತಿಪರರು ಎಬ್ಬಿಸಿರುವ ಈ ರಂಪಾಟ ನೋಡಿದರೆ ಆತ ಹೇಳಿದ್ದು ಸರಿ ಎಂದು ಕಾಣುತ್ತದೆ. ಆತ ಎಂದರೆ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್. ನೊಬೆಲ್ ಪ್ರಶಸ್ತಿ ಪುರಸ್ಕೃತ ದಕ್ಷಿಣ ಅಮೇರಿಕಾದ ಸ್ಪಾನಿಷ್ ಕಾದಂಬರಿಕಾರ. ಆತ ತನ್ನ ಪ್ರಸಿದ್ಧ ಕಾದಂಬರಿ One Hundred Years of Solitudeನಲ್ಲಿ ಈ ಪ್ರಗತಿಪರರು ಅನ್ನಿಸಿಕೊಂಡವರ ಬಗ್ಗೆ  ಒಂದು ಕುತೂಹಲಕಾರಿ, ಆದರೆ ಅಸಹ್ಯ ಮಾತನ್ನು ಹೇಳುತ್ತಾನೆ. ಓದುವಾಗ ನನಗೂ ಅತಿರೇಕದ ಮಾತು ಅನ್ನಿಸಿತು. ಆದರೆ ಕಳೆದ ಕೆಲವು ವರ್ಷಗಳ ಭಾರತದ ಬೌದ್ಧಿಕ "ಬೆಳವಣಿಗೆ"ಯನ್ನು ಗಮನಿಸಿದರೆ ಅದು ಅತಿರೇಕದ ಮಾತು ಅಲ್ಲ ಅನ್ನಿಸೀತು. ಮರೆತೆ! ಅವ ಹೇಳಿದ್ದು ಏನೆಂದರೆ "ಈ ಪ್ರಗತಿಪರರು (progressive) ತಾಯಿಯನ್ನು ಮದುವೆಯಾಗುವುದಾದರೂ ಸಮರ್ಥನೆಗಳನ್ನು ನೀಡುತ್ತಾರೆ ಬೇಕಾದರೆ!!"


ಕೆಲವು ಸ್ವಾಮಿಗಳಿಂದ ತೊಡಗಿ ಆದಿಉಡುಪಿ ಸೋಮಯ್ಯನ ತನಕ ಯಾರೂ ಚಕ್ರತೀರ್ಥದ ಒಂದು ಹನಿಯನ್ನೂ ಮುಟ್ಟದೆ ಚಕ್ರತೀರ್ಥಕ್ಕೆ ಉಗುಳುತ್ತಿದ್ದಾರೆ!!

-ವೀಕ್ಷಕ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post