ಮಂಗಳೂರು: ಚುಟುಕು ಸಾಹಿತ್ಯ ಬದುಕಿಗೆ ಲಾಲಿತ್ಯ ಪರಿಕಲ್ಪನೆಯಲ್ಲಿ ರಾಜ್ಯದಾದ್ಯಂತ ಸಾಹಿತ್ಯ ಸೇವೆಯಲ್ಲಿ ನಿರತವಾಗಿರುವ ಚುಟುಕು ಸಾಹಿತ್ಯ ಪರಿಷತ್ತಿನ ಉಳ್ಳಾಲ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಜೂನ್ 5ನೇ ತಾರೀಕು ಭಾನುವಾರ ಬೆಳಿಗ್ಗೆ 10 ಗಂಟೆಗೆ ಬೀರಿಯ ರೈತ ಸದನದಲ್ಲಿರುವ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಲಿದೆ.
ತಾಲೂಕು ಘಟಕದ ಉದ್ಘಾಟನೆಯನ್ನು ಸಾಹಿತಿ, ದಕ್ಷಿಣ ಕನ್ನಡ ಜಿಲ್ಲಾ ಚುಸಾಪದ ಗೌರವಾಧ್ಯಕ್ಷ ಇರಾ ನೇಮು ಪೂಜಾರಿಯವರು ವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಚುಸಾಪದ ಜಿಲ್ಲಾಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು ವಹಿಸುವರು. ಕೋಟೆಕಾರು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಕೆಳಗಿನಮನೆ ಕೋಟೆಕಾರು ಗುತ್ತು ಕೃಷ್ಣ ಶೆಟ್ಟಿ,ಕೋಟೆಕಾರು ವ್ಯವಸಾಯ ಸಹಕಾರಿ ಸಂಘದ ಕಾರ್ಯ ನಿರ್ವಹಣಾಧಿಕಾರಿ ಹರ್ಷವರ್ಧನ್ ಉಳ್ಳಾಲ, ಪೆರ್ಮನ್ನೂರು ಸಂತ ಸೆಬಸ್ಟಿಯನ್ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಮೌರಿಸ್ ಮೊಂತೇರೋ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಾ.ವೀ. ಕೃಷ್ಣದಾಸ್ ಪದಗ್ರಹಣವನ್ನು ನೆರವೇರಿಸುವರು. ಅಧ್ಯಕ್ಷರಾಗಿ ಎಡ್ವರ್ಡ್ ಲೋಬೋ, ಉಪಾಧ್ಯಕ್ಷರಾಗಿ ಎಂ.ಎಸ್. ವೆಂಕಟೇಶ್ ಗಟ್ಟಿ, ಕಾರ್ಯದರ್ಶಿಯಾಗಿ ವಾಣಿ ಲೋಕಯ್ಯ, ಜತೆ ಕಾರ್ಯದರ್ಶಿಗಳಾಗಿ ಗುಣವತಿ ಕಿನ್ಯ, ಅರ್ಚನಾ ಎಂ ಕುಂಪಲ, ಕೋಶಾಧಿಕಾರಿಯಾಗಿ ಯೋಗೀಶ್ ಮಲ್ಲಿಗೆಮಾಡು, ಕಾರ್ಯಕಾರಿ ಸದಸ್ಯರಾಗಿ ಎಸ್.ಕೆ. ಕುಂಪಲ, ಬಶೀರ್ ಕಿನ್ಯ, ವಲೇರಿಯನ್ ಸಿಕ್ವೇರಾ ಅಧಿಕಾರ ಸ್ವೀಕರಿಸುವರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಬಳಿಕ ನಡೆಯುವ ಬಹುಭಾಷಾ ಕವಿಗೋಷ್ಠಿಯಲ್ಲಿ ವಲೇರಿಯನ್ ಸಿಕ್ವೇರಾ, ಪ್ರವೀಣ್ ಅಮ್ಮೆಂಬಳ, ಎಸ್.ಕೆ. ಕುಂಪಲ, ಎಡ್ವರ್ಡ್ ಲೋಬೋ, ವೆಂಕಟೇಶ್ ಗಟ್ಟಿ, ಸೈಫುಲ್ಲಾ ಕುತ್ತಾರ್, ಯೋಗೀಶ್ ಮಲ್ಲಿಗೆಮಾಡು, ಶಾಂತಪ್ಪ ಬಾಬು, ಗುಣವತಿ ಕಿನ್ಯ, ಅರ್ಚನಾ ಬಂಗೇರಾ, ವಾಣಿ ಲೋಕಯ್ಯ, ಗುಣಾಜೆ ರಾಮಚಂದ್ರ ಭಟ್, ಆಕೃತಿ ಐ ಎಸ್ ಭಟ್, ಸುಮಂಗಲ ದಿನೇಶ್ ಶೆಟ್ಟಿ, ರಮಿತಾ ಕುತ್ತಾರ್
ದಿಕ್ಷಿತಾ ಕೋಳೂರು, ಲತೀಶ್ ಸಂಕೋಳಿಗೆ ಕವಿಗಳಾಗಿ ಭಾಗವಹಿಸಿ ಕವಿತಾ ವಾಚನ ಮಾಡುವರು ಎಂದು ಉಳ್ಳಾಲ ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಪ್ರಕಟಣೆ ತಿಳಿಸಿದೆ.
Post a Comment