ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಆರ್.ಟಿ.ಒ ಆನಂದ ಗೌಡರಿಗೆ ಸನ್ಮಾನ

ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಆರ್.ಟಿ.ಒ ಆನಂದ ಗೌಡರಿಗೆ ಸನ್ಮಾನಪುತ್ತೂರು: ಪುತ್ತೂರಿನ ಆರ್.ಟಿ.ಒ ಕೆ.ಆನಂದ ಗೌಡ ಅವರು ನಿವೃತ್ತರಾಗುತ್ತಿರುವ ನೆಲೆಯಲ್ಲಿ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಮಂಗಳವಾರ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಆನಂದ ಗೌಡ ಶಿಕ್ಷಣ ಕೇವಲ ಮಾಹಿತಿ ಒದಗಿಸುವ ಮಾಧ್ಯಮವಾಗದೆ ಬದುಕಿನ ದಾರಿ ತೋರುವ, ಜೀವನಾನುಭವ ಕಟ್ಟಿಕೊಡುವ ವಿಚಾರವಾಗಬೇಕು. ಶಾಲೆಯಲ್ಲಿ ಓದುವ ಮಕ್ಕಳಿಗೆ ಸಂಸ್ಕಾರ ದೊರಕಬೇಕಾದದ್ದು ಬಹಳ ಮುಖ್ಯ. ಅಂಬಿಕಾ ಶಿಕ್ಷಣ ಸಂಸ್ಥೆಗಳು ಈ ನೆಲೆಯಲ್ಲಿ ಅತ್ಯುತ್ಕೃಷ್ಟವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.


ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಉತ್ತಮವಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದುತ್ತಿರುವ ಜನಪರ ಕಾಳಜಿಯುಳ್ಳ ಅಧಿಕಾರಿಯೊಬ್ಬರನ್ನು ಗುರುತಿಸಬೇಕಾದದ್ದು ಜನರ ಕರ್ತವ್ಯ. ಆನಂದ ಗೌಡರು ಅಂತಹ ವಿಶಿಷ್ಟ ಅಧಿಕಾರಿ ಎಂದು ಬಣ್ಣಿಸಿದರು.


ಈ ಸಂದರ್ಭದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ, ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ ಕುಮಾರ್ ಕಮ್ಮಜೆ, ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.


ಜನಾನುರಾಗಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಆನಂದ ಗೌಡ ಅವರು ಮೇ 31ರಂದು ವೃತ್ತಿಜೀವನಕ್ಕೆ ವಿದಾಯ ಹೇಳಿದರು.

0 Comments

Post a Comment

Post a Comment (0)

Previous Post Next Post