ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗೃಹರಕ್ಷಕ ದಳದಿಂದ ಮಳೆಗಾಲದ ಪೂರ್ವಸಿದ್ಧತಾ ಸಭೆ

ಗೃಹರಕ್ಷಕ ದಳದಿಂದ ಮಳೆಗಾಲದ ಪೂರ್ವಸಿದ್ಧತಾ ಸಭೆ


ಮಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಮಳೆಸುರಿಯುತ್ತಿದ್ದು, ಇನ್ನೂ ನಾಲ್ಕು ದಿನ ಅವ್ಯಾಹತ ಮಳೆ ಬರುವ ಸಾಧ್ಯತೆ ಇರುವುದರಿಂದ ನೆರೆ ನಿಯಂತ್ರಣಕ್ಕೆ ಬೇಕಾದ ಎಲ್ಲಾ ಪರಿಕರಗಳನ್ನು, ಬೋಟುಗಳನ್ನು ಪರಿಶೀಲಿಸಿ ಸುಸ್ಥಿತಿಯಲ್ಲಿಡಲು ಆದೇಶ ನೀಡಲಾಯಿತು. ನೆರೆ ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದಲ್ಲಿ ಮುಂದೆ ಉಂಟಾಗುವ ಆಸ್ತಿಪಾಸ್ತಿ ಹಾನಿಗಳನ್ನು ಕಡಿತಗೊಳಿಸಲು  ಸಾಧ್ಯವಿದೆ. ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಘಟಕದ ವತಿಯಿಂದ ಮಳೆಗಾಲದ ಪೂರ್ವಸಿದ್ಧತಾ ಸಭೆ ನಡೆಸಿ ಗೃಹರಕ್ಷಕರಿಗೆ ಸೂಕ್ತ ಸಲಹೆ ಮಾರ್ಗದರ್ಶನ ನೀಡಲಾಯಿತು.


ಅವರಿಗೆ ಬೇಕಾದ ಲೈಫ್‍ಬಾಯ್, ಲೈಫ್ ಜಾಕೆಟ್, ರೈನ್‍ಬೂಟ್‍ಗಳನ್ನು ಒದಗಿಸಲಾಯಿತು ಹಾಗೂ ನೆರೆ ಸಂದರ್ಭದಲ್ಲಿ ಪರಿಹಾರ ಕಾರ್ಯಾಚರಣೆ ನಡೆಸಲು ನಿಪುಣ ಈಜುಗಾರರನ್ನು ಗುರುತಿಸಿ ರಕ್ಷಣಾ ತಂಡವನ್ನು ರಚಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟ ಡಾ|| ಮುರಲೀ ಮೋಹನ್ ಚೂಂತಾರು ಮೂಲ್ಕಿ ಘಟಕದ ಪ್ರಭಾರ ಘಟಕಾಧಿಕಾರಿ ಲೋಕೇಶ್ ಅವರಿಗೆ ಆದೇಶ ನೀಡಿದರು.


ತಜ್ಞ ಈಜುಗಾರರಾದ ಮೂಲ್ಕಿ ಗೃಹರಕ್ಷಕದಳದ ಗೃಹರಕ್ಷಕರಾದ ಸೈಯದ್, ನಾಸಿರ್ ಹಾಗೂ ಅಬ್ದುಲ್ ಅಜೀಜ್ ಅವರಿಗೆ ರಕ್ಷಣಾ ತಂಡದ ಉಸ್ತುವಾರಿಯನ್ನು ನೀಡಿದರು. ಮೂಲ್ಕಿ ವಲಯದ ಕಂದಾಯ ನಿರೀಕ್ಷಕರಾದ ಶ್ರೀ ರಾಜೇಶ್ ಅವರು ಈ ಸಂದರ್ಭದಲ್ಲಿ ಮಾತನಾಡಿ ಗೃಹರಕ್ಷಕರಿಗೆ ಬೇಕಾದ ಎಲ್ಲಾ ಪರಿಕರಗಳನ್ನು ನೀಡುತ್ತೇವೆ ಎಂದು ಭರವಸೆ ನೀಡಿದರು ಮತ್ತು ಸದಾಕಾಲ ಎಚ್ಚರದಿಂದ ಇರಲು ಸೂಚಿಸಿದರು. ಮೂಲ್ಕಿ ಘಟಕದ ಸುಮಾರು 35 ಮಂದಿ ಗೃಹರಕ್ಷಕರು ಈ ಸಭೆಯಲ್ಲಿ ಭಾಗವಹಿಸಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post