ಕನ್ನಡದ ತಿಂಡಿ ಕೇಂದ್ರದಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮ
ಬೆಂಗಳೂರು: ಕನ್ನಡದ ತಿಂಡಿ ಕೇಂದ್ರ ಮತ್ತು ಚಾಮರಾಜಪೇಟೆ ಸಾಂಸ್ಕೃತಿಕ ಕೇಂದ್ರ ಮತ್ತು ಚಾಮರಾಜಪೇಟೆ ವಿಪ್ರ ಸಭಾ ಇವರ ಸಹಯೋಗದಲ್ಲಿ ಮೇ 3 ರ ಮಂಗಳವಾರ ಬೆಳಗ್ಗೆ 10.30 ಗಂಟೆಗೆ "ಪೌರಕಾರ್ಮಿಕರೊಂದಿಗೆ ಒಂದು ಬೆಳಗು". ಕನ್ನಡದ ತಿಂಡಿ ಕೇಂದ್ರದಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮವನ್ನು ನಗರದ ಚಾಮರಾಜಪೇಟೆಯ ಕನ್ನಡದ ತಿಂಡಿ ಕೇಂದ್ರದಲ್ಲಿ ಮೇ 3 ರ ಬಸವ ಜಯಂತಿಯ ಪ್ರಯುಕ್ತ ಹಮ್ಮಿಕೊಳ್ಳಲಾಗಿದೆ.
ಅಂದು ಅಕ್ಷಯ ತೃತೀಯ. ಅಕ್ಷಯವಾಗಬೇಕಾದ್ದು ಮಾನವ ಪ್ರೀತಿ, ಅನ್ನವೇ ಹೊರತು ಚಿನ್ನವಲ್ಲ. ಬನ್ನಿ ಆಚರಿಸೋಣ ಎನ್ನುತ್ತಾರೆ ಕನ್ನಡದ ತಿಂಡಿ ಕೇಂದ್ರದ ಡಾ ಕೃ ವೆಂ ರಾಮಚಂದ್ರ.
'ಕಾರ್ಯಕ್ರಮದ ವೈಶಿಷ್ಟ್ಯತೆ": ನಗರದ ಸ್ವಚ್ಛತೆ ಕಾಪಾಡಲು ಪ್ರತಿನಿತ್ಯ ಹಗಲಿರುಳು ಶ್ರಮಿಸುವ 50 ರಿಂದ 80 ಜನ ರಕಾರ್ಮಿಕರೊಂದಿಗೆ ಚಹಾ ಕೂಟ ಮತ್ತು ಲಘು ಉಪಹಾರ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ- ಬಿಬಿಎಂಪಿಯ ಆಡಳಿತಾಧಿಕಾರಿಗಳ ಸಂಪರ್ಕಾಧಿಕಾರಿಗಳಾದ ಶಂಕರ್ ಎಸ್ ಎನ್, ಮತ್ತು ಸಮಾಜ ಸೇವಕರಾದ ವಿನಾಯಕ ಹಾಗೂ ನ. ಸುಧೀಂದ್ರ ರಾವ್ ಹಿರಿಯ ಪತ್ರಕರ್ತರು ಮತ್ತು ಕೆ ವಿ ಸತ್ಯನಾರಾಯಣ, ನಿವೃತ್ತ ಶಿಕ್ಷಕಿ ಶ್ರೀಮತಿ ಗಿರಿಜಾಂಬ, ಹಾಗೂ ಶಿಕ್ಷಕ- ಲೇಖಕ ಕಲ್ಗುಂಡಿ ನವೀನ್, ಮತ್ತು ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ಅಧ್ಯಕ್ಷರಾದ ಡಾ ಮುರಳೀಧರ, ಕನ್ನಡ ತಿಂಡಿ ಕೇಂದ್ರದ ಡಾ ಕೃ ವೆಂ ರಾಮಚಂದ್ರ ಮತ್ತು ಕೆ ವಿ ಅಶ್ವತ್ಥನಾರಾಯಣ ಇನ್ನೂ ಮುಂತಾದವರು ಭಾಗವಹಿಸಲಿದ್ದಾರೆ.
ವರದಿ : ತೀರ್ಥಹಳ್ಳಿ ಅನಂತ ಕಲ್ಲಾಪುರ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق