ನಮ್ಮ ಮಕ್ಕಳ "ಔಟ್ ಆಫ್ ಔಟ್" ಮಾರ್ಕ್ ನೇೂಡಿ ಸುಸ್ತಾಗಿ ಹೇೂದೆ!! ನಮ್ಮಮಕ್ಕಳು ನಿಜಕ್ಕೂ ಗ್ರೇಟ್! ಈ ಕೊರೊನಾ, ಈ ಹಿಜಾಬು, ಈ ಆನ್ ಲೈನ್, ಆಫ್ ಲೈನ್; ಈ ಒದ್ದೆ ಪಿಚ್ನಿನ ಮಧ್ಯೆಯೂ ಸಿಕ್ಸರ್ ಮೇಲೆ ಸಿಕ್ಸರ್ ಹೊಡೆದು 625ಕ್ಕೆ 625 ಸ್ಕೇೂರು ಹೊಡೆದಿದ್ದಾರೆ ಅಂದರೆ ನಮ್ಮ ಮೇಸ್ಟ್ರಗಳ ಫೌಂಟೆನ್ ಪೆನ್ನು ಎಷ್ಟು ಧೂಳಿ ಪಟವಾಗಿರಬಹುದು..!
ನನಗಂತೂ ನಮ್ಮಮಕ್ಕಳ ಮಾರ್ಕು ನೇೂಡಿ ಹೊಟ್ಟೆ ಉರಿಯಲು ಶುರುವಾಗಿದೆ. ನಮ್ಮ ಕಾಲದಲ್ಲಿ 60 ತೆಗೆದರೆ ಸಾಕು ರಸ್ತೆ ತುಂಬಾ ನಮ್ಮದೇ ಮೆರವಣಿಗೆ. ಈಗ 60-70. 80 ಬಿಡಿ 99 ತೆಗೆದರೂ ಸಾಲ ಅನ್ನುವ ಕಾಲ.
ನಮ್ಮಮಕ್ಕಳಿಗೆ ಶಾಬಾಸ್ ಗಿರಿ ಹೇಳಲೇ ಬೇಕು. ಈ ಕೊರೊನ, ಈ ಹಿಜಾಬು, ಈ ಆಫ್ ಲೈನ್ ಆನ್ ಲೈನ್. ಒಂದೇ ಎರಡೇ ಜಂಜಾಟ. ಆದರೂ ನಮ್ಮ ಮಕ್ಕಳು ಎದೆಗುಂದದೆ ರಾಜ್ಯದ ಫಲಿತಾಂಶ ದಲ್ಲಿ ಹಿಂದಿನ ಹತ್ತು ವರುಷಗಳ ದಾಖಲೆಯನ್ನು ಮುರಿದು ಬಿಟ್ಟಿದ್ದಾರೆ. ಅದರಲ್ಲಂತೂ ನಮ್ಮ ಹುಡುಗಿಯರು 90ರ ಗಡಿ ದಾಟಿಸಿ ಬಿಟ್ಟಿದ್ದಾರೆ.
ಕೆಲವೇ ವರುಷಗಳ ಹಿಂದೆ ಸಾಧಕ ವಿದ್ಯಾರ್ಥಿಗಳ ಪಟ್ಟಿಯನ್ನು ಹುಡುಕುವುದು ತುಂಬಾ ಕಷ್ಟವಾಗಿತ್ತು. ಈ ಬಾರಿ ಪ್ರತಿ ಶಾಲೆಯಲ್ಲಿ ರಾಜ್ಯಕ್ಕೆ ಪ್ರಥಮರ ಸಂಖ್ಯೆ ಯೇ ತುಂಬಿ ಹೇೂಗಿದೆ. ಹಾಗಾಗಿ ಸಾಧಕರನ್ನು ಹುಡುಕಿ ಪತ್ರಿಕೆಯಲ್ಲಿ ಪರಿಚಯಿಸುವ ಕೆಲಸವೇ ಇಲ್ಲ. ಯಾವ ವಿದ್ಯಾರ್ಥಿ ಕೇಳಿದರೂ "ಔಟ್ ಆಫ್ ಔಟ್. ಅಂದರೆ ನಾಟ್ ಔಟ್"..
ನಮ್ಮ ಆಥ೯ಶಾಸ್ತ್ರ ಸಿದ್ಧಾಂತದಲ್ಲಿ ಒಂದು ಮಾತಿದೆ. "demand & supply". ಈ ಸಿದ್ಧಾಂತದ ಆಪಾಯವೇ ನಮ್ಮ ವಿದ್ಯಾರ್ಥಿಗಳಿಗೆ ಬರಬಹುದು. ಅವರು ಎಣಿಸಿದ ಕಾಲೇಜು ಕೇೂರ್ಸ್‌ಗಳು ಸಿಗದೇ ಹೇೂಗ ಬಹುದು.
ಈ ಟಾಪರ್ಸ್‌ಗಳ ಮಧ್ಯೆ ಜಸ್ಟ್ ಪಾಸಾದ ನಿಷ್ಣಾತರು ಕೇ..ಕೇ.. ಹಾಕಿ ಎಂಜಾಯ್ (enjoy) ಮಾಡಿರುವ ಸುದ್ದಿ ಜಾಲತಾಣದಲ್ಲಿ ವೈರಲ್ ಆಗಿ ಬಿಟ್ಟಿದೆ. "ಇದಪ್ಪಾ ಬದುಕಿನ ಪರೀಕ್ಷೆ ಅಂದರೆ" ಅನ್ನುವ ತರದಲ್ಲಿ.. ಮಾರ್ಕ್ ಒಂದೇ ನಮ್ಮ ಬದುಕನ್ನು ನಿರ್ಧರಿಸುವ ಆಳತೆಗೇೂಲಲ್ಲ ಅನ್ನುವ ಸಿಹಿ ಸುದ್ದಿ. ಈ enjoyment ನಲ್ಲಿ ಆಡಗಿರುವ ಸಂದೇಶವೂ ಹೌದು. ಅಲ್ವೇ??
-ಪ್ರೊ. ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಉಡುಪಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق