ನಿಟ್ಟೆ: ಏ. 30 ರಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಿಂದ 'ಹೀಟ್ ಟ್ರೀಟ್ಮೆಂಟ್ ಮತ್ತು ಸಂಶೋಧನೆಗೆ ಇರುವ ಅವಕಾಶಗಳು' ಎಂಬ ವಿಷಯದ ಬಗ್ಗೆ ತಜ್ಞ ತಾಂತ್ರಿಕ ಉಪನ್ಯಾಸ ಕಾರ್ಯಕ್ರಮ ನಡೆಸಲಾಯಿತು.
ಎಂ.ಐ.ಟಿ, ಮಣಿಪಾಲದ ಮೆಕಾನಿಕಲ್ ಮತ್ತು ಇಂಡಸ್ಟ್ರಿಯಲ್ ವಿಭಾಗದ ಮುಖ್ಯಸ್ಥ ಡಾ. ಸತ್ಯ ಶಂಕರ ಶರ್ಮಾ ರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಭಾಗವಹಿಸಿದ್ದರು.
ಮೆಕಾನಿಕಲ್ ವಿದ್ಯಾರ್ಥಿ ಸಂಘ ಏಮ್ಸ್ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸಂಘದ ಪರವಾಗಿ ವಿಭಾಗದ ಮುಖ್ಯಸ್ಥ ಡಾ. ಶ್ರೀನಿವಾಸ ಪೈ. ಪಿ ಅವರು ಸಂಪನ್ಮೂಲ ವ್ಯಕ್ತಿ, ಡಾ. ಶರ್ಮಾರನ್ನು ಗೌರವಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق