ಮಂಗಳೂರು: ಮಂಡ್ಯದ ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯ ಘಟಕ ಆಯೋಜಿಸಿದ "ರಾಜ್ಯ ಮಟ್ಟದ 25ನೇ ಕವಿ ಕಾವ್ಯ ಮೇಳ ಹಾಗೂ ಅಭಿನಂದನಾ ಸಮಾರಂಭ"ದಲ್ಲಿ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಿಕೆ ಡಾ. ಭಾರತಿ ಪಿಲಾರ್ ಅವರ "ನವಿಲುಗರಿ" ಕವನ ಸಂಕಲನಕ್ಕೆ ಅತ್ಯುತ್ತಮ ಕವನ ಸಂಕಲನ ಪ್ರಶಸ್ತಿ ದೊರಕಿದೆ.
ಶ್ರೀ ಷ. ಬ್ರ. ಮುಮ್ಮಡಿ ಷಡಕ್ಷರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು ಕಾರ್ಯಕ್ರಮ ಉದ್ಘಾಟಿಸಿದರು. ವೀರ ಸಿಂಹಾಸನ ಸಂಸ್ಥಾನ ಮಠ ದನಗೂರು ಅವರ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ಎಲೆಕೇರಿ ಡಿ. ರಾಜಶೇಖರ್ ವಹಿಸಿದ್ದರು. ಸೇವಾಕಿರಣ ಟ್ರಸ್ಟ್ ಮಂಡ್ಯ ಕಾರ್ಯದರ್ಶಿ ಜಿ. ವಿ. ನಾಗರಾಜು, ರಾಜ್ಯ ಉಪಾಧ್ಯಕ್ಷೆ ಮಂಜುಳಾ ರಮೇಶ್ ಮೈಸೂರ್ ಮೊದಲಾದವರು ಉಪಸ್ಥಿತರಿದ್ದರು. ಕಸ್ತೂರಿ ಸಿರಿಗನ್ನಡ ವೇದಿಕೆಯ ರಾಜ್ಯಾಧ್ಯಕ್ಷ ಪೋತೇರ ಮಹದೇವು ಪ್ರಾಸ್ತಾವಿಕ ಭಾಷಣ ಮಾಡಿದರು.
ರಾಜ್ಯದ ವಿವಿದೆಡೆಗಳಿಂದ ಬಂದ ಸುಮಾರು 30 ಕವಿಗಳು ಕವನ ವಾಚನ ಮಾಡಿದರು. ಕವಿಗಳಿಗೆ ಕಸ್ತೂರಿ ಕೌಸ್ತುಭ ಹಾಗೂ ಕಾವ್ಶಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ರಾಜ್ಯ ಮಟ್ಟದ ಆಯ್ದ ಕವಿಗಳ ಕವನ ಸಂಕಲನ ʼಕಾನನʼವನ್ನು ಸಾಹಿತಿ ಮಹೇಶ್ ಕುಮಾರ್ ಹನಕೆರೆ ಬಿಡುಗಡೆ ಮಾಡಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق