ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮೇ 8: ಕಥಾ ಸಮಯ, ಕಾವ್ಯ ಸಂಚಯ, ಕೃತಿಗಳ ಬಿಡುಗಡೆ ಮತ್ತು ಸನ್ಮಾನ

ಮೇ 8: ಕಥಾ ಸಮಯ, ಕಾವ್ಯ ಸಂಚಯ, ಕೃತಿಗಳ ಬಿಡುಗಡೆ ಮತ್ತು ಸನ್ಮಾನ




ಮಂಗಳೂರು: ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ವತಿಯಿಂದ 'ಅಭಿನಂದನಾ' ಎಂಬ ಸಾಹಿತ್ಯ ಕಾರ್ಯಕ್ರಮವನ್ನು ಮೇ 8, ಭಾನುವಾರದಂದು ಮಂಗಳೂರು ಕೆ.ಎಸ್ ರಾವ್ ರಸ್ತೆಯಲ್ಲಿರುವ ವಸಂತ್ ಮಹಲ್ ಸಭಾಂಗಣದಲ್ಲಿ ಆಯೋಜಿಸಿದೆ. ಕಾರ್ಯಕ್ರಮದಲ್ಲಿ ಹಿರಿಯ ಕವಿ ಇರಾ ನೇಮು ಪೂಜಾರಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮವೂ ನಡೆಯಲಿದೆ.


ಚುಟುಕು ಸಾಹಿತ್ಯ ಪರಿಷತ್ತಿನ ಸದಸ್ಯರು ಆರು ತಿಂಗಳಲ್ಲಿ ಬರೆದಿರುವ ಆಯ್ದ ಬರಹಗಳ ಸಂಕಲನ 'ಚುಸಾಪ ಸಮಗ್ರ ಸಾಹಿತ್ಯ ಸಂಪುಟ' ವನ್ನು ಪತ್ರಕರ್ತ ಕವಿ ಎಡ್ವರ್ಡ್ ಲೋಬೋ ಬಿಡುಗಡೆಗೊಳಿಸುವರು. ಕವಿತೆಯ ಸಾರ್ಥಕತೆ ಕೃತಿಯನ್ನು ಕವಯತ್ರಿ ಆಕೃತಿ ಐ ಎಸ್ ಭಟ್ ಬಿಡುಗಡೆಗೊಳಿಸುವರು.


ಕಥಾ ಸಮಯದ ಅಧ್ಯಕ್ಷತೆಯನ್ನು ಕಥೆಗಾರ್ತಿ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕಿ ಅಕ್ಷಯ ಆರ್ ಶೆಟ್ಟಿ ವಹಿಸಲಿದ್ದು ಕಾವ್ಯ ಸಂಚಯ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಕವಯತ್ರಿ, ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ತಲಪಾಡಿ ಶಾಖೆಯ ಪ್ರಬಂಧಕಿ ಶ್ರೀಮತಿ ವಾಣಿ ಲೋಕಯ್ಯ ಅವರು ವಹಿಸುವರು. ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹರೀಶ ಸುಲಾಯ ಒಡ್ಡಂಬೆಟ್ಟು, ಗೌರವಾಧ್ಯಕ್ಷ ಇರಾ ನೇಮು ಪೂಜಾರಿ, ಉದ್ಯಮಿ ಗುರುಪ್ರಸಾದ್ ಕಡಂಬಾರ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.


ಕಥಾ ಸಮಯದಲ್ಲಿ ರತ್ನ ಕೆ ಭಟ್ ತಲಂಜೇರಿ, ರಶ್ಮಿ ಸನಿಲ್, ವ.ಉಮೇಶ್ ಕಾರಂತ, ಚಿತ್ರಾಶ್ರೀ ಕೆ ಎಸ್, ಎಡ್ವರ್ಡ್ ಲೋಬೊ, ಅರುಣಾ ನಾಗರಾಜ್, ಜೀವಪರಿ, ರೇಖಾ ನಾರಾಯಣ್ ಪಕ್ಷಿಕೆರೆ ನಳಿನಾಕ್ಷಿ ಉದಯರಾಜ್, ಪ್ರೇಮಾ ಮುಲ್ಕಿ ಕಥೆಗಾರರಾಗಿ ಭಾಗವಹಿಸಿ ತಮ್ಮ ಕಥೆಗಳನ್ನು ಪ್ರಸ್ತುತ ಪಡಿಸುವರು.


'ಕಾವ್ಯ ಸಂಚಯ' ಕವಿಗೋಷ್ಠಿಯಲ್ಲಿ ಕವಿಗಳಾದ ಅಬ್ದುಲ್ ಸಮದ್ ಬಾವ, ಜಯರಾಮ್ ಪಡ್ರೆ, ಎಸ್ ಕೆ ಕುಂಪಲ, ವಿಶ್ವನಾಥ್ ಕುಲಾಲ್ ಮಿತ್ತೂರು, ಬದ್ರುದ್ದೀನ್ ಕೂಳೂರು, ಪಂಕಜಾ ಕೆ.ಮುಡಿಪು, ವೆಂಕಟೇಶ್ ಗಟ್ಟಿ, ಗೀತಾ ಲಕ್ಷ್ಮೀಶ್ ಕೊಂಚಾಡಿ, ಮನ್ಸೂರ್ ಮುಲ್ಕಿ, ಸುಮಾಡ್ಕರ್ ಸ್ವರೂಪ, ರೇಖಾ ಸುದೇಶ್ ರಾವ್, ಮಂಜುಶ್ರೀ ನಲ್ಕ, ಹಿತೇಶ್ ಕುಮಾರ್, ಮನೋಜ್ ಕುಮಾರ್ ಶಿಬಾರ್ಲ, ಉಮೇಶ್ ಶಿರಿಯ, ಇಬ್ರಾಹಿಂ ಖಲೀಲ್, ಆಕೃತಿ ಐ ಎಸ್ ಭಟ್, ಡಾ.ಸುರೇಶ್ ನೆಗಳಗುಳಿ,

ರೇಮಂಡ್ ಡಿಕುನಾ, ಚಂದನಾ ಕೆ.ಎಸ್, ಸುಮಂಗಲ ದಿನೇಶ್ ಶೆಟ್ಟಿ,ಅರ್ಚನಾ ಎಂ ಬಂಗೇರ ಕುಂಪಲ, ಗೋಪಾಲಕೃಷ್ಣ ಶಾಸ್ತ್ರಿ, ಸೌಮ್ಯ ಗೋಪಾಲ್, ಸುಹಾನ ಸಯ್ಯದ್ ಎಂ., ಸೌಮ್ಯ ಆರ್ ಶೆಟ್ಟಿ ಮೊದಲಾದವರು ಭಾಗವಹಿಸುವರು ಎಂದು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಪ್ರಕಟಣೆ ತಿಳಿಸಿದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post