ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಯುಎನ್‌ಒಡಿಸಿ ಸಲಹೆಗಾರರಾಗಿ ಡಾ. ಶ್ರೀಕುಮಾರ್ ಮೆನನ್ ನಿಯೋಜನೆ

ಯುಎನ್‌ಒಡಿಸಿ ಸಲಹೆಗಾರರಾಗಿ ಡಾ. ಶ್ರೀಕುಮಾರ್ ಮೆನನ್ ನಿಯೋಜನೆ



ಮಂಗಳೂರು: ಹೆಸರಾಂತ ಅಂತಾರಾಷ್ಟ್ರೀಯ ಮಾದಕ ವ್ಯಸನಿ ತಜ್ಞ, ಡಾ. ಶ್ರೀಕುಮಾರ್ ಮೆನನ್ ಅವರು ಭಾರತ, ಬಾಂಗ್ಲಾದೇಶ, ಭೂತಾನ್, ನೇಪಾಳ, ಶ್ರೀಲಂಕಾ ಮತ್ತು ಮಾಲ್ಡೀವ್ಸ್ ಅನ್ನು ಒಳಗೊಂಡ ಆಗ್ನೇಯ ಏಷ್ಯಾದ ಆರು ದೇಶಗಳ ವಿಶೇಷ ಮಾದಕ ದ್ರವ್ಯ ನಿಯೋಜನೆಗಾಗಿ ವಿಶ್ವಸಂಸ್ಥೆಯ ಆಫೀಸ್ ಆಫ್ ಡ್ರಗ್ಸ್ & ಕ್ರೈಮ್ಸ್ (UNODC) ಸಲಹೆಗಾರರಾಗಿ ಆಯ್ಕೆಯಾಗಿದ್ದಾರೆ.  


ಡಾ. ಮೆನನ್ ಅವರು ಮಾಜಿ ಐಆರ್‌ಎಸ್‌ ಅಧಿಕಾರಿ ಮತ್ತು ರಾಷ್ಟ್ರೀಯ ಕಸ್ಟಮ್ಸ್, ಪರೋಕ್ಷ ತೆರಿಗೆಗಳು ಮತ್ತು ಮಾದಕ ವಸ್ತುಗಳ (NACIN) ನ ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ.  ಅವರು ಮಂಗಳೂರು ವಿಶ್ವವಿದ್ಯಾನಿಲಯದಿಂದ ನಾರ್ಕೋಟಿಕ್ಸ್ ಮತ್ತು ಸೈಕೋಟ್ರೋಪಿಕ್ ಪದಾರ್ಥಗಳು ಎಂಬ ವಿಷಯದಲ್ಲಿ ಪಿಎಚ್.ಡಿ. ಪಡೆದಿದ್ದಾರೆ. ಅವರು ಅಮೆರಿಕದ ಜೇಮ್ಸ್ ಮಾರ್ಟಿನ್ ಸೆಂಟರ್ ಫಾರ್ ನಾನ್-ಪ್ರೊಲಿಫರೇಷನ್ ಸ್ಟಡೀಸ್, ಮಾಂಟೆರಿ, ಇದರ ಫೆಲೋ ಆಗಿದ್ದಾರೆ. ಅಮೆರಿಕದ ಜಾರ್ಜಿಯಾ ವಿಶ್ವವಿದ್ಯಾಲಯದ ಸಿಐಟಿಎಸ್‌ ನ ಫೆಲೋ ಕೂಡ ಆಗಿದ್ದಾರೆ. ನವಮಂಗಳೂರು ಬಂದರು ಟ್ರಸ್ಟ್‌ನ ಟ್ರಸ್ಟಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

0 Comments

Post a Comment

Post a Comment (0)

Previous Post Next Post