ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪುರಾತನ ಐತಿಹ್ಯಗಳನ್ನು ಏಕಾಏಕಿ ತನಿಖೆ ಮಾಡಿ ಅಂದ್ರೆ ಸಾಧ್ಯವೆ? ಯು.ಟಿ ಖಾದರ್‌ಗೆ ಡಾ. ಭರತ್ ಶೆಟ್ಟಿ ತರಾಟೆ

ಪುರಾತನ ಐತಿಹ್ಯಗಳನ್ನು ಏಕಾಏಕಿ ತನಿಖೆ ಮಾಡಿ ಅಂದ್ರೆ ಸಾಧ್ಯವೆ? ಯು.ಟಿ ಖಾದರ್‌ಗೆ ಡಾ. ಭರತ್ ಶೆಟ್ಟಿ ತರಾಟೆ


ಸುರತ್ಕಲ್: ಮಳಲಿ ಮಸೀದಿಯಲ್ಲಿ ಪುರಾತನ ಹಿಂದೂ ವಾಸ್ತು ವಿನ್ಯಾಸ ಕಂಡು ಬಂದಿದ್ದು ನ್ಯಾಯಾಲಯದ ಆದೇಶದ ಮೇರೆಗೆ ದ.ಕ ಜಿಲ್ಲಾಧಿಕಾರಿ ತನಿಖೆ ಕೈಗೊಂಡಿದ್ದಾರೆ.ಇದನು ತಕ್ಷಣ ಬಿಟ್ಟು ಕೊಡಲು ಸಾಧ್ಯವೆ, ಜಿಲ್ಲಾಧಿಕಾರಿಯವರ ವಿರುದ್ಧ ಶಾಸಕ ಯು.ಟಿ ಖಾದರ್ ಅಸಮಾಧಾನ ವ್ಯಕ್ತ ಪಡಿಸಿರುವುದು ಮುಸ್ಲಿಂ ಸಮುದಾಯದ ಲೀಡರ್ ಎಂದು ತೋರಿಸಿಕೊಳ್ಳಲು ಇರಬಹುದು ಎಂದು ಶಾಸಕ ಡಾ.ಭರತ್ ಶೆಟ್ಟಿ ವ್ಯಂಗ್ಯವಾಡಿದ್ದಾರೆ.


ಐನೂರು ವರ್ಷಗಳ ಹಿಂದಿನ ಮಸೀದಿಯ ಕೆತ್ತನೆ ಹಿಂದೂ ಶೈಲಿಯಲ್ಲಿಯೇ ಇರಬಹುದು ಎಂದಾದರೆ, ಹಿಂದೂ ಬಾಂಧವರ ಕೈಯ್ಯಲ್ಲಿ ಈ ಭೂಮಿಯೂ ಇದ್ದಿರಬಹುದಲ್ಲವೆ? ಅಲ್ಲಿ ದೈವಸ್ಥಾನ ನಿರ್ಮಿಸಿ ಕಾಲಕ್ರಮೇಣ ವಂಶಾವಳಿ ಇಲ್ಲದ ಹಾಗೆ ಆಗಿರಬಹುದಲ್ಲೆವ? ಈ ಬಗ್ಗೆಯೂ ಜಿಲ್ಲಾಧಿಕಾರಿ ಸಮಗ್ರವಾಗಿ ತನಿಖೆ ನಡೆಸಲು ಸಮಯಾವಕಾಶ ನೀಡಬೇಕಿದೆ. ಇದನ್ನೇ ಸರಕಾರ ಮಾಡಿದೆ. ಅವಸರ ಮಾಡಿದರೆ ಇದು ನ್ಯಾಯಾಲಯದ ಕಟಕಟೆ ಏರಿ ಮತ್ತಷ್ಟು ವಿಳಂಬ ಆಗಬಹುದು. ಮಾಜಿ ಸಚಿವರು ಹೆಚ್ಚಿನ ಜ್ಞಾನ ಉಳ್ಳವರು ಈ ಬಗ್ಗೆ ಸ್ವಲ್ಪ ತಾಳ್ಮೆಯಿಂದ ಇರಬೇಕು ಎಂದು ಶಾಸಕ ಡಾ.ಭರತ್ ಶೆಟ್ಟಿ ಸಲಹೆ ನೀಡಿದ್ದಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 تعليقات

إرسال تعليق

Post a Comment (0)

أحدث أقدم