ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಡಾ| ನಲ್ಲೂರು ಪ್ರಸಾದ್‌ಗೆ ಕಲ್ಕೂರ ಪ್ರತಿಷ್ಠಾನದಿಂದ ಗೌರವಾರ್ಪಣೆ

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಡಾ| ನಲ್ಲೂರು ಪ್ರಸಾದ್‌ಗೆ ಕಲ್ಕೂರ ಪ್ರತಿಷ್ಠಾನದಿಂದ ಗೌರವಾರ್ಪಣೆ


ಮಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಡಾ| ನಲ್ಲೂರು ಪ್ರಸಾದ್ ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ ಸಂದರ್ಭ ಅವರನ್ನು ಕಲ್ಕೂರ ಪ್ರತಿಷ್ಠಾನ ದಿಂದ ಶಾಲು ಹೊದಿಸಿ ಗೌರವಿಸಲಾಯಿತು. ಈ ಸಂದರ್ಭ ಪಠ್ಯಪುಸ್ತಕಗಳ, ಕುರಿತು ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತಾಗಿ ಸಂವಾದ ನಡೆಸಲಾಯಿತು.


ರಾಷ್ಟ್ರೀಯ ಭಾವೈಕ್ಯತೆಯನ್ನು ಕಾಪಾಡಿಕೊಂಡು ಇತಿಹಾಸ, ವಿಜ್ಞಾನ, ತಂತ್ರಜ್ಞಾನ, ಕೃಷಿ, ಸಂಸ್ಕೃತಿ ಹೀಗೆ ಬಹುನೆಲೆಗಳನ್ನು  ಒಳಗೊಂಡ ಭಾಷಾ ಪ್ರೌಢಿಮೆಯ ಜ್ಞಾನವನ್ನು ಬೆಳೆಸಬಲ್ಲ ಸಮಗ್ರ ಶಿಕ್ಷಣ ಮಕ್ಕಳಿಗೆ ಲಭಿಸಬೇಕಾದುದು ಇಂದಿನ ಅನಿವಾರ್ಯತೆಯಾಗಿದೆ, ಎಂದು ನಲ್ಲೂರು ಪ್ರಸಾದ್ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.


ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಹಾಗೂ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಸರ್ವ ಧರ್ಮ ವಿಚಾರಧಾರೆಗಳನ್ನು ಒಳಗೊಂಡಂತೆ ಪರಿಸರ, ಸಂಸ್ಕೃತಿ, ಇತಿಹಾಸ ಸಹಿತ ಪ್ರಾಪಂಚಿಕ ಜ್ಞಾನ ನೀಡಬಲ್ಲ ಪಠ್ಯಗಳುಳ್ಳ ರಾಷ್ಟ್ರೀಯ ಶಿಕ್ಷಣ ನೀತಿ ರೂಪುಗೊಳ್ಳಲಿ ಎಂದರು.


ಈ ಸಂದರ್ಭ ಚಿತ್ರದುರ್ಗ ಮಠದ ಶ್ರೀ ವಿಜಯಾನಂದ ಸ್ವಾಮೀಜಿ, ಜಯ ಬಸವ ತಪೋವನ, ಚಿಕ್ಕಮಗಳೂರಿನ ಜಯ ಬಸವಾನಂದ ಸ್ವಾಮೀಜಿ, ಸರ್ವ ಧರ್ಮ ಸಮನ್ವಯ ಸಮಿತಿಯ ಅಧ್ಯಕ್ಷ ಮೌಶಿರ್ ಅಹಮದ್ ಸಾಮಣಿಗೆ, ಕರ್ನಾಟಕ ರಕ್ಷಣಾ ವೇದಿಕೆಯ ರಾಝಿಕ್ ಆತೂರು, ಶಾಹುಲ್ ಖಾಸಿಮ್, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಹಿರಿಯ ಯಕ್ಷಗಾನ ಪ್ರಸಂಗ ಕರ್ತ, ಅರ್ಥದಾರಿ ನಿತ್ಯಾನಂದ ಕಾರಂತ ಪೊಳಲಿ ಮತ್ತಿತರರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post