ಬಂಟ್ವಾಳ: ಇಲ್ಲಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಬಳಿಕ ನಡೆಯುವ ದೃಢಕಲಶ ಉತ್ಸವ ಇಂದು (ಮೇ 27, ಶುಕ್ರವಾರ) ನಡೆಯಿತು.
ಕ್ಷೇತ್ರದ ತಂತ್ರಿ ಶ್ರೀಪಾದ ಪಾಂಗಣ್ಣಾಯ ಮಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನ ಸಹಿತ ದೇವರಿಗೆ ದೃಢಕಲಶ ಅಭಿಷೇಕ ಮತ್ತು ವಿಶೇಷ ಪೂಜೆ ಹಾಗೂ ರಂಗಪೂಜೆ ನೆರವೇರಿಸಿದರು. ಇದೇ ವೇಳೆ ದೇವಳದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವದ ಲೆಕ್ಕಪತ್ರ ಮಂಡನೆ ನಡೆಯಿತು.
ಮುಂಬರುವ ನಾಗರಪಂಚಮಿ ಸಂದರ್ಭದಲ್ಲಿ 'ನಾಗದರ್ಶನ' ಮತ್ತು ಅಶ್ವತ್ಥ ಕಟ್ಟೆ ಪೂಜೆ ನಡೆಸುವಂತೆ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಸಲಹೆ ನೀಡಿದರು.
ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಕರೆಂಕಿಜೆ, ಗೌರವಾಧ್ಯಕ್ಷ ರಾಜಾ ಎಸ್.ಹೊಳ್ಳ ಪತ್ತುಮುಡಿ, ಅನುವಂಶಿಕ ಪ್ರಧಾನ ಅರ್ಚಕ ಕೆ.ಸುಂದರ ಹೊಳ್ಳ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ, ಪ್ರಮುಖರಾದ ಶರತ್ ಕುಮಾರ್ ಕೊಯಿಲ, ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಯಶೋಧರ ರೈ ದೇರಾಜೆಗುತ್ತು, ನಿರುಪಮಾ ಎಸ್.ಭಂಡಾರಿ, ಮೋಹನ್ ಕೆ.ಶ್ರೀಯಾನ್, ರಾಮದಾಸ್ ಬಂಟ್ವಾಳ್, ಪ್ರಭಾಕರ ಪ್ರಭು, ಚಂದ್ರಶೇಖರ ಗೌಡ ಕಾರಂಬಡೆ, ಯಮುನಾ ತಿಮ್ಮಪ್ಪ ಪೂಜಾರಿ, ನಳಿನಾಕ್ಷಿ ಮೋಹನ ಪೂಜಾರಿ, ಆನಂದ ಟೈಲರ್, ಹರೀಶ ಶೆಟ್ಟಿ ಕೈತ್ರೋಡಿ, ಅರ್ಚಕ ನಾಗೇಶ ರಾವ್ ಮತ್ತಿತರರು ಇದ್ದರು. ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ ಸುವರ್ಣ ಸ್ವಾಗತಿಸಿ, ವಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment