ನವದೆಹಲಿ: ಗೃಹ ಬಳಕೆ ಅಡುಗೆ ಅನಿಲ ಬೆಲೆ ಮತ್ತೆ ಹೆಚ್ಚಳವಾಗಿದೆ. 14.2 ಕೆಜಿ ತೂಕದ ಸಿಲಿಂಡರ್ ಬೆಲೆ 50 ರೂಪಾಯಿ ಹೆಚ್ಚಳವಾಗಿದ್ದು ನೂತನ ದರ ಇಂದು ಶನಿವಾರ ಮೇ 7ರಿಂದಲೇ ಜಾರಿಗೆ ಬರಲಿದೆ. ಇನ್ನೂ ಅಡುಗೆ ಅನಿಲ ಬೆಲೆ 999 ರೂಪಾಯಿ 50 ಪೈಸೆಯಾಗಲಿದೆ.
ಕಳೆದ ವಾರ, 19-ಕೆಜಿ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 102 ರೂಪಾಯಿ 50 ಪೈಸೆಯಷ್ಟು ಹೆಚ್ಚಿಸಲಾಗಿತ್ತು.
ಇದು ಸತತ ಮೂರನೇ ಬಾರಿಗೆ ಹೆಚ್ಚಳವಾಗಿದೆ. ಮಾರ್ಚ್‌ನಲ್ಲಿ ಗೃಹಬಳಕೆಯ ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್‌ಗೆ 50 ರೂಪಾಯಿ ಹೆಚ್ಚಳವಾಗಿತ್ತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق