ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಉಪ್ಪಿನಂಗಡಿ ಗೃಹರಕ್ಷಕದಳ ಘಟಕಕ್ಕೆ ಜಿಲ್ಲಾ ಕಮಾಂಡೆಂಟ್ ಭೇಟಿ, ಪ್ರವಾಹ ರಕ್ಷಣಾ ತಂಡ ರಚನೆ

ಉಪ್ಪಿನಂಗಡಿ ಗೃಹರಕ್ಷಕದಳ ಘಟಕಕ್ಕೆ ಜಿಲ್ಲಾ ಕಮಾಂಡೆಂಟ್ ಭೇಟಿ, ಪ್ರವಾಹ ರಕ್ಷಣಾ ತಂಡ ರಚನೆ



ಉಪ್ಪಿನಂಗಡಿ: ಗೃಹರಕ್ಷಕದಳ ಉಪ್ಪಿನಂಗಡಿ ಘಟಕಕ್ಕೆ ದ.ಕ ಜಿಲ್ಲಾ ಕಮಾಂಡೆಂಟ್ ಡಾ||ಮುರಲೀ ಮೋಹನ್ ಚೂಂತಾರುರವರು ರವಿವಾರ ಭೇಟಿ ನೀಡಿ ಉಪ್ಪಿನಂಗಡಿಯ ಪ್ರವಾಹ ರಕ್ಷಣಾ ತಂಡದ ಪೂರ್ವ ಸಿದ್ಧತೆಯನ್ನು ಪರಿಶೀಲನೆ ನಡೆಸಿದರು


ಇದೇ ವೇಳೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಸೂಚನೆಯಂತೆ ಉಪ್ಪಿನಂಗಡಿ ಪ್ರಭಾರ ಘಟಕಾಧಿಕಾರಿ ದಿನೇಶ್. ಬಿ ನೇತೃತ್ವದಲ್ಲಿ ಓರ್ವ ಈಜುಗಾರ, ಎಲೆಕ್ಟ್ರಿಶಿಯನ್, ಕಟ್ಟಡ ನಿರ್ಮಾಣ ಪರಿಣತ, ರಬ್ಬರ್ ದೋಣಿ ಆಪರೇಟರ್, ಹಾಗೂ ಓರ್ವ ಸಹಾಯಕರನ್ನು ಒಳಗೊಂಡ 5 ಜನ ಗೃಹರಕ್ಷಕರ ಪ್ರವಾಹ ರಕ್ಷಣಾ ತಂಡ ತಂಡವನ್ನು ರಚಿಸಲಾಗಿದೆ.


ತಂಡವು ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು ರವರ ನಿರ್ದೇಶನದಂತೆ ಉಪ್ಪಿನಂಗಡಿ ಉಪ ತಹಶೀಲ್ದಾರ್ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಲಿದ್ದು ಕಂದಾಯ ಹಾಗೂ ಪೋಲಿಸ್ ಇಲಾಖೆಯ ಸಹಕಾರದೊಂದಿಗೆ ರಕ್ಷಣಾ ಕಾರ್ಯದಲ್ಲಿ ತೊಡಗಲಿದೆ ಎಂದು ಕಮಾಡೆಂಟ್ ರವರು ತಿಳಿಸಿದರು.


ಈ ಸಂದರ್ಭದಲ್ಲಿ ಉಪ್ಪಿನಂಗಡಿ ಉಪ ತಹಶೀಲ್ದಾರ್ ಚೆನ್ನಪ್ಪ ಗೌಡ, ಗ್ರಾಮ ಸಹಾಯಕ ಯತೀಶ್, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರವಿ ಶಾಂತಿ, ಸದಸ್ಯರಾದ ಅಬ್ದುಲ್ ಮಜೀದ್, ಉದ್ಯಮಿ ಸಚಿನ್ ಸುಂದರ ಗೌಡ, ಘಟಕಾಧಿಕಾರಿ ರಾಮಣ್ಣ, ಪ್ರವಾಹ ರಕ್ಷಣಾ ತಂಡದ ಸದಸ್ಯರಾದ ‌ಸೆಕ್ಷನ್ ಲೀಡರ್ ಜನಾರ್ಧನ ಆಚಾರ್ಯ, ಅಣ್ಣು.ಬಿ, ಸಮದ್, ಸೋಮನಾಥ್, ಜೀಪು ಚಾಲಕರಾದ ದಿವಾಕರ್, ದುಷ್ಯಂತ್, ಘಟಕದ ಪೋಲಿಸ್ ಠಾಣಾ ಹಾಗೂ ಇತರ ಕರ್ತವ್ಯ ಗೃಹರಕ್ಷರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم