ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನೇತ್ರ ದಾನ ಸಂಕಲ್ಪ ಶಿಬಿರ: 50ಕ್ಕೂ ಅಧಿಕ ಮಹಿಳೆಯರಿಂದ ನೇತ್ರದಾನ ಘೋಷಣೆ

ನೇತ್ರ ದಾನ ಸಂಕಲ್ಪ ಶಿಬಿರ: 50ಕ್ಕೂ ಅಧಿಕ ಮಹಿಳೆಯರಿಂದ ನೇತ್ರದಾನ ಘೋಷಣೆ


ಮಂಗಳೂರು: ಮಹಿಳಾ ಸಭಾ ಮಂಗಳೂರು, ಭಗಿನಿ ಸಮಾಜ ಮಂಗಳೂರು ಹಾಗೂ ಸಕ್ಷಮ ದಕ್ಷಿಣ ಕನ್ನಡ ಜಂಟಿ ಪ್ರಾಯೋಜಕತ್ವದಲ್ಲಿ  ಏ. 30ರಂದು ಸಂಜೆ 4 ಘಂಟೆಗೆ ಭಗಿನಿ ಸಮಾಜ ಆವರಣದಲ್ಲಿ ನೇತ್ರ ದಾನ ಸಂಕಲ್ಪ ಶಿಬಿರವನ್ನು ಆಯೋಜಿಸಲಾಯಿತು.


ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸಕ್ಷಮ ಕರ್ನಾಟಕ ಪ್ರಾಂತದ ಟ್ರಸ್ಟೀ ಜಯದೇವ ಕಾಮತ್ ಹಾಗೂ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರೂ ಸಮಾಜ ಸೇವಕರೂ ಆದ ಉಮೇಶ್ ನಾಯಕ್ ಭಾಗವಹಿಸಿದರು.


ಜಯದೇವ್ ಕಾಮತ್ ಈ ಸಂದರ್ಭದಲ್ಲಿ ಮಾತನಾಡಿ, ಸಕ್ಷಮದ ಧ್ಯೇಯೋದ್ದೇಶದ ಬಗ್ಗೆ ಮಾಹಿತಿ ನೀಡಿದರು. ನೇತ್ರ ದಾನದ ಅರಿವನ್ನು ಸಮಾಜದಲ್ಲಿ ಮೂಡಿಸಲು ಎಲ್ಲರೂ ಮುಂದಾಗಬೇಕೆಂದು ಕೇಳಿಕೊಂಡರು. ಸೇರಿದ ಮಾತೆಯರನ್ನು ಉದ್ದೇಶಿಸಿ ಮಾತನಾಡಿದ ಉಮೇಶ್ ನಾಯಕ್, ಸಮಾಜ ಸೇವೆಯಲ್ಲಿ ಮಾತೃಶಕ್ತಿಯ  ಬಾಗವಹಿಸುವಿಕೆಯ ಮಹತ್ವವನ್ನು ಒತ್ತಿ ಹೇಳಿದರು. ನೇತ್ರ ದಾನವು ಕಾರ್ನಿಯ ಅಂಧತ್ವ ಮುಕ್ತ ಭಾರತಕ್ಕೆ ಇರುವ ಒಂದೇ ದಾರಿ ಎಂದು ಸ್ಪಷ್ಟವಾಗಿ ತಿಳಿ ಹೇಳಿದರು.


ಸಮಾಜವು ತನ್ನ ದೃಷ್ಟಿಯನ್ನು ಕೊಂಚ ಬದಲಾಯಿಸಿ, ಡಿವ್ಯಾಂಗ ಸಮಾಜವನ್ನು ಮುಖ್ಯ ವಾಹಿನಿಗೆ ತರಲು ಹೆಚ್ಚಿನ ಸಹಾಯ ಮಾಡಬೇಕಾಗಿ ಕೋರಿದರು.


ಕಾರ್ಯಕ್ರಮದಲ್ಲಿ ಸುಮಾರು 50ಕ್ಕೂ ಮಿಕ್ಕಿ ಮಾತೆಯರು ನೇತ್ರ ದಾನ ಸಂಕಲ್ಪವನ್ನು ತೊಟ್ಟು ಸಕ್ಷಮದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಪ್ರಮಾಣಪತ್ರ ಪಡಕೊಂಡರು.


ನೇತ್ರ ದಾನ ಸಂಕಲ್ಪ ಮಾಡಿದ ಭಗಿನಿ ಸಮಾಜದ ಮಾಜಿ ಅಧ್ಯಕ್ಷೆ ಶ್ರೀಮತಿ ವಜ್ರ ರಾವ್ ತಮ್ಮ ಅನಿಸಿಕೆಗಳನ್ನು ಹಂಚಿ ಕೊಂಡರು. ನೇತ್ರದಾನ ಒಂದು ರಾಷ್ಟ್ರ ಮಟ್ಟದ ಚಳುವಳಿ ಆಗಬೇಕು ಮತ್ತು ನೇತ್ರ, ರಾಷ್ಟ್ರ ಸಂಪತ್ತು ಎಂದು ಘೋಷಣೆ ಆಗುವುದು ಸೂಕ್ತ ಎಂಬ ಮಾತ್ತನ್ನು ವ್ಯಕ್ತಪಡಿಸಿದರು.


ಮಹಿಳಾ ಸಭಾದ ಅಧ್ಯಕ್ಷೆ ಶ್ರೀಮತಿ ರಾಜೇಶ್ವರಿ ಭಟ್ ಕಾಕುಂಜೆ ನೇತ್ರ ದಾನ ಅತಿ ಉತ್ತಮ ದಾನ ಎಂದರು.  ನೇತ್ರದಾನದ ಸಂಕಲ್ಪ ಮಾಡಿದ ಎಲ್ಲಾ ಸದಸ್ಯರಿಗೂ ವಿಶೇಷ ಧನ್ಯವಾದಗಳನ್ನು ಸಮರ್ಪಿಸಿದರು. ಭಗಿನಿ ಸಮಾಜದ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಉಳುವಾನ ತನ್ನ ಬಹು ವರ್ಷದ ಕನಸು ನನಸಾಯಿತು ಎಂದು ಹರ್ಷ ವ್ಯಕ್ತ ಪಡಿಸಿದರು. ಕಾರ್ಯಕ್ರಮವನ್ನು ಆಯೋಜಿಸಲು ಸಕ್ಷಮ ದಕ್ಷಿಣ ಕನ್ನಡದ ಕಾರ್ಯದರ್ಶಿ ಹರೀಶ್ ಪ್ರಭು ಹಾಗೂ ರಾಜಶೇಖರ ಕಾಕುಂಜೆ ಅವರು ಕೊಟ್ಟ ಸಹಕಾರವನ್ನು ನೆನಪಿಸಿ ಕೊಂಡರು.


ಕೊನೆಯಲ್ಲಿ ಭಗಿನಿ ಸಮಾಜದ ಕಾರ್ಯದರ್ಶಿ ಶ್ರೀಮತಿ ಸೌಮ್ಯ ಶೆಟ್ಟಿ ವಂದನಾರ್ಪಣೆ ಮಾಡಿದರು. ಭಗಿನಿ ಸಮಾಜದ ಶ್ರೀಮತಿ ಕಾತ್ಯಾಯನಿ ಭಿಡೆ ಕಾರ್ಯಕ್ರಮದ ನಿರೂಪಣೆ ಮಾಡಿದರು. ಸಮತಾ ಮಹಿಳಾ ಬಳಗದ ಅಧ್ಯಕ್ಷೆ ಶ್ರೀಮತಿ ಶೀಲಾ ಜಯಪ್ರಕಾಶ್ ಹಾಗೂ ಬ್ಲೈಂಡ್ ಅಸೋಸಿಯೇಷನ್‌ನ ರವೀಂದ್ರನಾಥ್ ಮತ್ತು ಶ್ರೀಮತಿ ಶೋಭಾ ರಾವ್ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದರು. ರಾಷ್ಟ್ರ ಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

0 تعليقات

إرسال تعليق

Post a Comment (0)

أحدث أقدم