ಕಾಸರಗೋಡು: ಉಡುಪಿಯ ಶ್ರೀ ಕೃಷ್ಣ ಮಠದ ಆವರಣದ ಕೃಷ್ಣಾoಗಣ ಭವ್ಯ ವೇದಿಕೆಯಲ್ಲಿ ಕಥಾಬಿಂದು ಪ್ರಕಾಶನದ ಪಿ ವಿ ಪ್ರದೀಪ್ ಕುಮಾರ್ ಸಹಯೋಗದೊಂದಿಗೆ ಡಾ. ವಾಣಿಶ್ರೀ ಕಾಸರಗೋಡು ಗಡಿನಾಡ ಕನ್ನಡತಿ ಇವರ ನೇತ್ರತ್ವದಲ್ಲಿ ಬುಧವಾರ (ಮೇ 18) ಬೆಳಿಗ್ಗೆ 9.00 ರಿಂದ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ.) ಕಾಸರಗೋಡು ಇದರ ವತಿಯಿಂದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು.
ಈ ಕಾರ್ಯಕ್ರಮದಲ್ಲಿ ಡಾ. ವಾಣಿಶ್ರೀ ಕಾಸರಗೋಡು ನಿರೂಪಣೆಗೈದರು. ಗುರುರಾಜ್ ಕಾಸರಗೋಡು ಇವರು ಧನ್ಯವಾದ ಸಮರ್ಪಣೆ ಮಾಡಿದರು. ಡಾ. ವೆಂಕಟ ಗಿರೀಶ್ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಭವಾನಿ ಬೆಣ್ಣೆಕುದ್ರು, ಪ್ರಣಮ್ಯ ದೇವಿ, ಅಹನಾ ಎಸ್ ರಾವ್, ಸಾನ್ವಿ. ಎಸ್. ಹೇರೂರು, ಲಕ್ಷ್ಮಿ ನಂದ, ಸನುಷ, ಸನುಷ ಸುನಿಲ್, ವಿಜಿತ ಕೇಶವನ್, ಅನನ್ಯಾ ಬಾರಕೂರು, ಪ್ರಖ್ಯಾತ್ ಭಟ್, ನಂದನ, ಧನ್ಯಶ್ರೀ, ಹರಿತ ಕುಮಾರಿ, ಸುಶ್ಮಿತಾ, ನಿವೇದಿತಾ ಮೊದಲಾದ ಕಲಾವಿದರು ಗಾನ ನಾಟ್ಯ ವನ್ನು ಪ್ರದರ್ಶಿಸಿದರು.
ಡಾ. ವಾಣಿಶ್ರೀ ಕಾಸರಗೋಡು ಇವರು ಮಾತನಾಡುತ್ತಾ ಸಾಂಸ್ಕೃತಿಕ ಕಾರ್ಯಕ್ರಮದಿಂದ ನಿರಂತರ ನಗೆ ಮತ್ತು ನಲಿವಿನ ಹರಿವಿರುತ್ತದೆ ಎಂದು ಹೇಳಿದರು. ಭಾಗವಹಿಸಿದ ಎಲ್ಲಾ ಕಲಾವಿದರಿಗೂ ಸಂಘದ ವತಿಯಿಂದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಅವರ ಉಪಸ್ಥಿತಿಯಲ್ಲಿ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರ ಆಶೀರ್ವಾದದೊಂದಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق