ಮಂಗಳೂರು: ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕ ಹಾಗೂ ಶ್ರೀ ಭಾರತೀ ಕಾಲೇಜು, ನಂತೂರು ಇವುಗಳ ಸಹಯೋಗದಲ್ಲಿ ಎರಡು ದತ್ತಿ ಉಪನ್ಯಾಸಗಳು ಮಂಗಳೂರಿನ ಭಾರತೀ ಕಾಲೇಜಿನಲ್ಲಿ ನಡೆಯಿತು. ಶ್ರೀ ಆನಂದನಾಥರಿಂದ ನೀಡಲ್ಪಟ್ಟ, ದಿ ಟೈಲರ್ಸ್ ಕೊಗ್ಗ ಜೋಗಿ ಶ್ರೀಮತಿ ಗಂಗಮ್ಮ ಸ್ಮಾರಕಾರ್ಥ ದತ್ತಿ ಉಪನ್ಯಾಸವು ಶ್ರೀ ಆನಂದನಾಥರ ಸೋದರಳಿಯ ಶ್ರೀ ಕೇಶವನಾಥರ ಉಪಸ್ಥಿತಿಯಲ್ಲಿ ನಡೆಯಿತು. ಹಿರಿಯ ಸಾಹಿತಿ ಡಾ. ಮೀನಾಕ್ಷಿ ರಾಮಚಂದ್ರ ಅವರು "ಕರ್ನಾಟಕದಲ್ಲಿ ನಾಥ ಸಂಪ್ರದಾಯ" ಎಂಬ ವಿಷಯದಲ್ಲಿ ಉಪನ್ಯಾಸವನ್ನಿತ್ತರು.
ಎರಡನೆಯ ದತ್ತಿ ಉಪನ್ಯಾಸವು ವಿದ್ವಾನ್ ಶ್ರೀ ವಿ.ಬಿ. ಹೊಸಮನೆಯವರಿಂದ ನೀಡಲ್ಪಟ್ಟ 'ಕಲಾದರ್ಶನ ದತ್ತಿ' ಕಾರ್ಯಕ್ರಮದ ಅಂಗವಾಗಿ "ಸಣ್ಣ ಪತ್ರಿಕೆಗಳು ಮತ್ತು ಸಾಹಿತ್ಯ" ಎಂಬ ವಿಷಯದ ಬಗ್ಗೆ ಖ್ಯಾತ ವೈದ್ಯ ಹಾಗೂ ಬರಹಗಾರ ಡಾ.ಮುರಲಿ ಮೋಹನ ಚೂಂತಾರು ಅವರು ಉಪನ್ಯಾಸವನ್ನಿತ್ತರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾದ ಡಾ. ಮಂಜುನಾಥ ರೇವಣಕರರು ವಹಿಸಿದ್ದರು. ಭಾರತೀ ಕಾಲೇಜಿನ ವಕ್ತಾರರಾದ ಶ್ರೀ ಉದಯಶಂಕರ ನೀರ್ಪಾಜೆಯವರು ಮುಖ್ಯ ಅತಿಥಿಗಳಾಗಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಘಟಕದ ಪದಾಧಿಕಾರಿ ಶ್ರೀ ತಿರುಮಲೇಶ್ವರ ಭಟ್ ದಿ.ವಿ.ಬಿ. ಹೊಸಮನೆಯವರನ್ನು ಸ್ಮರಿಸಿದರು. ದ.ಕ.ಜಿಲ್ಲಾ ಘಟಕದ ಘಟಕದ ಗೌರವ ಕಾರ್ಯದರ್ಶಿ ಶ್ರೀ ಗಣೇಶ ಪ್ರಸಾದ ಜೀ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆಗೈದರು. ಘಟಕದ ಕೋಶಾಧಿಕಾರಿ ಸುಬ್ರಾಯ ಭಟ್ಟರು ವಂದನಾರ್ಪಣೆಗೈದರು. ಭಾರತೀ ಕಾಲೇಜಿನ ಅದ್ಯಾಪಕ ವೃಂದ, ವಿದ್ಯಾರ್ಥಿನಿಯರು ಹಾಗೂ ದ.ಕ.ಜಿಲ್ಲಾ ಸಾಹಿತ್ಯ ಪರಿಷತ್ತಿನ ಮಂಗಳೂರು ತಾಲೂಕು ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Post a Comment