ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಇವರು ಕರ್ನಾಟಕ ತುಳು ಸಾಹಿತ್ಯ ಅಕಾಡಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಜುಲೈ 24ರಂದು ಮಂಗಳೂರಿನ ತುಳು ಭವನದಲ್ಲಿ ಏರ್ಪಡಿಸಿರುವ 8ನೇ ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಸುಸಂದರ್ಭದಲ್ಲಿ ಚುಟುಕು ಕವನ ಸಂಕಲನ ಹೊರತರಲು ಯೋಜನೆ ಹಾಕಿಕೊಂಡಿದ್ದು ಆಸಕ್ತ ಕವಿಗಳಿಂದ ನಾಲ್ಕು ಸಾಲುಗಳ ಎರಡು ಚುಟುಕುಗಳನ್ನು ಆಹ್ವಾನಿಸಲಾಗಿದೆ. ಕವನ ಸಂಕಲನದ ಕವಿಗಳಿಗೆ ಒಂದು ಪ್ರತಿಯನ್ನು ಉಚಿತವಾಗಿ ನೀಡಲಾಗುವುದು. ಚುಟುಕುಗಳನ್ನು 8310388415 ಸಂಖ್ಯೆಗೆ ಜೂನ್ 10ರೊಳಗೆ ವಾಟ್ಸಾಪ್ ಮೂಲಕ ಕಳಿಸಿಕೊಡಲು ಕೋರಲಾಗಿದೆ.
ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಆಸಕ್ತ ಕವಿಗಳು ಒಂದು ತುಳು ಒಂದು ಕನ್ನಡ ಕಳುಹಿಸಲೂ ಅವಕಾಶವಿದೆ.ಎರಡೂ ತುಳು ಭಾಷೆಯಲ್ಲಿ ಬರೆಯ ಬಹುದು ಅಥವಾ ಎರಡೂ ಕನ್ನಡದಲ್ಲಿ ಇರಬಹುದು.ಕನ್ನಡ/ತುಳು ಇವುಗಳ ಉಪಭಾಷೆಗಳಲ್ಲೂ ಬರೆಯಬಹುದು (ಉದಾ: ಹವ್ಯಕ, ಕುಂದಗನ್ನಡ, ಇತ್ಯಾದಿ)ಎಂದು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಪ್ರಕಟಣೆ ತಿಳಿಸಿದೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق