ಮಂಗಳೂರು: ರಕ್ತದಾನ ಮಾಡುವುದರಿಂದ ಭ್ರಾತೃತ್ವ ಬೆಳೆಯುತ್ತದೆ. ಜೀವ ಉಳಿಸಿದ ಸಾರ್ಥಕತೆ ದೊರಕುತ್ತದೆ. ನಿರಂತರವಾಗಿ ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯ ವೃದ್ಧಿಸುವುದರ ಜೊತೆಗೆ ಸಮಾಜದ ಇತರ ಜನರ ಜೀವಗಳನ್ನು ಉಳಿಸಿದ ಪುಣ್ಯ ನಿಮಗೆ ದೊರಕುತ್ತದೆ. ಈ ನಿಟ್ಟಿನಲ್ಲಿ ಜನರು ನಿರಂತರವಾಗಿ ನಿಯಮಿತವಾಗಿ ರಕ್ತದಾನ ಮಾಡುವುದು ಸೂಕ್ತ ಎಂದು ಖ್ಯಾತ ನ್ಯಾಯವಾದಿ ದಿನಕರ ಶೆಟ್ಟಿ ಅಭಿಪ್ರಾಯಪಟ್ಟರು.
ಇಂದು (ಮೇ 24) ದಿವಂಗತ ಸೀತಮ್ಮ ಶೆಟ್ಟಿ ಅವರ ಪ್ರಥಮ ವರ್ಷದ ಪುಣ್ಯ ತಿಥಿಯ ಸ್ಮರಣಾರ್ಥವಾಗಿ ಕೆ.ಕೆ ಫ್ರೆಂಡ್ಸ್ ಮಂಗಳೂರು ಹಾಗೂ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ (ರಿ) ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ರಕ್ತ ನಿಧಿ ಸರ್ಕಾರಿ ವೆನ್ ಲಾಕ್ ಆಸ್ಪತ್ರೆ ಇವರ ಸಹಕಾರದೊಂದಿಗೆ ನಗರದ ಕೊಟ್ಟಾರದಲ್ಲಿರುವ ಶ್ರೀ ಕೃಷ್ಣ ಜ್ಯಾನೋದಯ ಭಜನಾ ಮಂದಿರದಲ್ಲಿ ಬೃಹತ್ ಕಾರ್ಯಕ್ರಮ ಶಿಬಿರ ಜರುಗಿತು.
ಕಾರ್ಯಕ್ರಮವನ್ನು ದಿನಕರ ಶೆಟ್ಟಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಅರವಿಂದ ಬೆಲ್ಚಾಡ ಅವರು ರಕ್ತದಾನ ಮಾಡುವುದರ ಮುಖಾಂತರ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಂಜನ್ ಮಲ್ಪೆ, ಜೀತು, ಮನೋಹರ್ ಮುಂತಾದವರು ಉಪಸ್ಥಿತರಿದ್ದರು.
ವೆನ್ಲಾಕ್ ಆಸ್ಪತ್ರೆಯ ರಕ್ತನಿಧಿಯ ಮೇಲ್ವಿಚಾರಕ ಮತ್ತು ಹಿರಿಯ ತಂತ್ರಜ್ಞರಾದ ಅಂಥೋನಿಯವರು ರಕ್ತದಾನದ ಮಹತ್ವದ ಬಗ್ಗೆ ಮಾತನಾಡಿದರು. ವೆನ್ ಲಾಕ್ ಆಸ್ಪತ್ರೆಯ ವೈದ್ಯರಾದ ಡಾ|| ವಿಜಯಶ್ರೀ ಮತ್ತು ತಂಡದವರು ರಕ್ತದಾನ ಶಿಬಿರ ನಡೆಸಿಕೊಟ್ಟರು. ಕಾರ್ಯಕ್ರಮದ ಸಂಯೋಜಕರಾದ ಚೂಂತಾರು ಸರೋಜಿನಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ|| ಮುರಲೀ ಮೋಹನ್ ಚೂಂತಾರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಇನ್ನೋರ್ವ ಸಂಯೋಜಕರಾದ ಚಂದ್ರಹಾಸ ಶೆಟ್ಟಿ ಧನ್ಯವಾದಗೈದರು. 35 ಮಂದಿ ರಕ್ತದಾನ ಮಾಡಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق