ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಂಟ್ವಾಳ; ಅಂಗಡಿಗಳಿಗೆ ನುಗ್ಗಿದ ಟೋಯಿಂಗ್ ಲಾರಿ, ಚಾಲಕನಿಗೆ ಗಂಭೀರ ಗಾಯ

ಬಂಟ್ವಾಳ; ಅಂಗಡಿಗಳಿಗೆ ನುಗ್ಗಿದ ಟೋಯಿಂಗ್ ಲಾರಿ, ಚಾಲಕನಿಗೆ ಗಂಭೀರ ಗಾಯ

 


ಬಂಟ್ವಾಳ: ಟೋಯಿಂಗ್ ಲಾರಿಯು ಬಸ್ ತಂಗುದಾಣ, ಅಂಗಡಿಗಳಿಗೆ ಡಿಕ್ಕಿ ಹೊಡೆದ ಬಳಿಕ ಹೋಟೆಲ್​​ಗೆ ನುಗ್ಗಿದ್ದು, ಇದರಿಂದಾಗಿ ಚಾಲಕ ಗಂಭೀರ ಗಾಯಗೊಂಡಿದ್ದಾನೆ.

ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಕೊಡಾಜೆ ಎಂಬಲ್ಲಿ ಘಟನೆ ಸಂಭವಿಸಿದೆ. ಪುತ್ತೂರು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದಾಗ ಟೋಯಿಂಗ್ ಲಾರಿ ಕೊಡಾಜೆ ಜಂಕ್ಷನ್‌ನಲ್ಲಿ ನಂದಿನಿ ಹಾಲಿನ ಅಂಗಡಿ, ಬೇಕರಿ, ಬಸ್ ತಂಗುದಾಣ, ಮೊಬೈಲ್ ಅಂಗಡಿ ಮಹಡಿಗೆ ಡಿಕ್ಕಿ ಹೊಡೆದು ಹೋಟೆಲ್​​ಗೆ ನುಗ್ಗಿದೆ ಎನ್ನಲಾಗುತ್ತಿದೆ.

ಶಿರಸಿ ಮೂಲದ ಲಾರಿ ಎಂದು ತಿಳಿದು ಬಂದಿದೆ‌. ಹಗಲು ವೇಳೆ ಇಲ್ಲಿ ಹೆಚ್ಚಿನ ಜನ ಸಂದಣಿ ಕಾಣುತ್ತಿದ್ದು, ರಾತ್ರಿ 1 ಗಂಟೆ ಅಂದಾಜಿಗೆ ಘಟನೆ ಸಂಭವಿಸಿದೆ. ಹಾಗಾಗಿ, ಭಾರಿ ಅನಾಹುತ ತಪ್ಪಿದೆ. ಅಂಗಡಿಗಳಿಗೆ ಹಾನಿ ಉಂಟಾಗಿದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 تعليقات

إرسال تعليق

Post a Comment (0)

أحدث أقدم