ಮಧ್ಯಪ್ರದೇಶ: ವ್ಯಕ್ತಿಯೊಬ್ಬ ಒಂದೇ ಸಮಾರಂಭದಲ್ಲಿ ಮೂವರು ಮಹಿಳೆಯರಿಗೆ ತಾಳಿ ಕಟ್ಟಿರುವುದು ವ್ಯಾಪಕ ಪ್ರಚಾರವಾಗಿದೆ. ಮಧ್ಯ ಪ್ರದೇಶದ ಅಲಿರಾಜ್ಪುರ ಜಿಲ್ಲೆಯಲ್ಲಿ ಇಂತಹದೊಂದು ಪ್ರಸಂಗ ನಡೆದಿದೆ.
42 ವರ್ಷದ ವ್ಯಕ್ತಿಯೊಬ್ಬ ಒಂದೇ ಮಂಟಪದಲ್ಲಿ ಮೂವರು ಮಹಿಳೆಯರಿಗೆ ತಾಳಿ ಕಟ್ಟಿದ್ದಾನೆ. ಬುಡಕಟ್ಟು ಸಂಪ್ರದಾಯದಂತೆ ಮೂವರಿಗೆ ಒಟ್ಟಿಗೆ ತಾಳಿ ಕಟ್ಟಿದ್ದಾನೆ. ಅವರ ಸಂಪ್ರದಾಯದಂತೆ ಈ ಮದುವೆ ಮೂರು ದಿನಗಳ ಕಾಲ ನಡೆದಿದೆ.
ಈ ಮದುವೆಗೆ ಮಹಿಳೆಯ ಕಡೆಯವರಿಂದಲೂ ಸಂಪೂರ್ಣ ಒಪ್ಪಿಗೆ ಇದ್ದು, ಇದೀಗ ಒಂದೇ ಮನೆ ಸೇರಿಕೊಳ್ಳುತ್ತಿದ್ದಾರೆ. ಈ ಮದುವೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ವರನಿಗೆ ಶುಭ ಹಾರೈಸಲಾಗುತ್ತಿದೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment