ಮಂಗಳೂರು: ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ವತಿಯಿಂದ 5ನೇ ವರ್ಷದ ಹಲಸು ಹಬ್ಬ -2022, ಮೇ 28 ಮತ್ತು 29 ರಂದು ಎರಡು ದಿನಗಳ ಕಾಲ ಮಂಗಳೂರಿನ ಶರವು ದೇವಸ್ಥಾನದ ಸಮೀಪವಿರುವ ಬಾಳಂಭಟ್ ಹಾಲ್ ನಲ್ಲಿ ನಡೆಯಲಿದೆ.
ಎರಡೂ ದಿನಗಳಲ್ಲಿ ಬೆಳಗ್ಗೆ 9ರಿಂದ ಸಂಜೆ 6ರ ವರೆಗೂ ವೈವಿಧ್ಯಮಯವಾದ ಹಲಸಿನ ಖಾದ್ಯಗಳು, ಹಲಸಿನ ವಿವಿಧ ತಳಿಗಳ ಗಿಡಗಳ ಮತ್ತು ಹಣ್ಣುಗಳ ಮಾರಾಟ, ಸಾವಯವ ತರಕಾರಿ ಮತ್ತು ದಿನಸಿ ವಸ್ತುಗಳ ಮಾರಾಟ, ನಗರ ಕೃಷಿ ಸಲಕರಣೆಗಳು, ಗಿಡಗಳು ಮತ್ತು ಮಣ್ಣಿನ ಚಟ್ಟಿಗಳ ಮಾರಾಟ ನಡೆಯಲಿದೆ.
ಹಲಸಿನ ಹಣ್ಣಗಳ ಮೌಲ್ಯವರ್ಧಿತ ಉತ್ಪನ್ನಗಳು, ಹಲಸಿನ ಹೋಳಿಗೆ, ಹಲಸಿನ ಐಸ್‌ಕ್ರೀಮ್ ಇತ್ಯಾದಿ ಈ ಹಬ್ಬದಲ್ಲಿ ಗ್ರಾಹಕರಿಗೆ ವಿಶೇಷ ದರಗಳಲ್ಲಿ ಲಭ್ಯವಿರುತ್ತವೆ. ಅಲ್ಲದೆ ಅಡಿಕೆಯ ಮಾಲ್ಟ್ ಬಿಡುಗಡೆ ಮತ್ತು ಮಾರಾಟವೂ ಇರುತ್ತದೆ.
ಹಲಸು ಹಬ್ಬ ಉದ್ಘಾಟನೆ 28ರಂದು ಬೆಳಗ್ಗೆ 9ಕ್ಕೆ ಉದ್ಘಾಟನೆ ನಡೆಯಲಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್ ಅವರು ಹಬ್ಬವನ್ನು ಉದ್ಘಾಟಿಸಲಿದ್ದಾರೆ. ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆ ಮತ್ತು ಹಾಸನದ ಕೃಷಿ ಸಾಧಕಿ ಶ್ರೀಮತಿ ಹೇಮ ಅನಂತ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಂಗಳೂರು ಸಾವಯವ ಕೃಷಿಕ ಗ್ರಾಹಕ ಬಳಗದ ಹಾಗೂ ಸಾಹಿತ್ಯ ಕೇಂದ್ರದ ಮುಖ್ಯಸ್ಥರಾದ ರತ್ನಾಕರ ಕುಳಾಯಿ ಅವರು ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق