ಸಿರವಾರ: ತಾಲ್ಲೂಕಿನ ಕವಿತಾಳ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥನೊಬ್ಬ ವ್ಯಕ್ತಿಯನ್ನು ಗುದ್ದಲಿಯಿಂದ ಹೊಡೆದು ಕೊಲೆ ಮಾಡಿದ ಘಟನೆಯೊಂದು ಕವಿತಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಸಿರವಾರ ತಾಲೂಕಿನ ಕವಿತಾಳ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥ ಕಡ್ಡೋಣಿ ಮೌನೇಶ (46) ಆರೋಪಿಯಾಗಿದ್ದು, ಮೌನಪ್ಪ ಸೋಮನಮರಡಿ (46) ಎಂಬಾತ ಕೊಲೆಯಾದ ವ್ಯಕ್ತಿಯಾಗಿದ್ದಾನೆ.
ಮೌನಪ್ಪ ನನ್ನು ಕೊಲೆ ಮಾಡುವ ಮುಂಚೆ ಕವಿತಾಳ ಗ್ರಾಮದಲ್ಲಿ ಜರುಗುವ ಸಂತೆಯಲ್ಲಿ ಗುದ್ದಲಿ ಹಿಡಿದು ಓಡಾಡುತ್ತಿದ್ದ, ಅದಲ್ಲದೆ ನಾಲ್ಕು ಬಣಿವೆಗಳಿಗೆ ಬೆಂಕಿ ಹಚ್ಚುವ ಮೂಲಕ ವಿಕೃತಿ ಮೆರೆದಿದ್ದ ಏನ್ನಲಾಗುತ್ತಿದೆ.
ಈ ವಿಚಾರ ತಿಳಿದು ಮೌನೇಶನ ಅಣ್ಣ ವ್ಯಕ್ತಿಗೆ ಬುದ್ಧಿ ಹೇಳಲು ಬಂದ ವೇಳೆ ಕಲ್ಲಿನಿಂದ ತಲೆಗೆ ಹೊಡೆದಿದ್ದ ಎನ್ನಲಾಗುತ್ತಿದೆ.
ಇದಾದ ನಂತರ ಕವಿತಾಳ ಪಟ್ಟಣದಲ್ಲಿ ಗುದ್ದಲಿ ಹಿಡಿದು ಒಡಾಡುತ್ತಿದ್ದ ವೇಳೆ ಮೌನಪ್ಪ ಎಂಬ ವ್ಯಕ್ತಿ ಮತ್ತು ಮೌನೇಶ್ ಮಧ್ಯೆ ಇದೆ ಗುದ್ದಲಿ ವಿಚಾರಕ್ಕೆ ಜಗಳವಾಗಿದೆ.
ಈ ವೇಳೆ ಮಾತಿನ ಚಕಮಕಿ ನಡೆದು ಮಾನಸಿಕ ಅಸ್ವಸ್ಥ ಮೌನೇಶ್, ಮೌನಪ್ಪನ ತಲೆಗೆ ಗುದ್ದಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ.
ಗುದ್ದಲಿಯಿಂದ ತಲೆಗೆ ಹೊಡೆದ ಪರಿಣಾಮವಾಗಿ ಹೆಚ್ಚಿನ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೌನಪ್ಪ ಮೃತಪಟ್ಟಿದ್ದಾನೆ.
ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕವಿತಾಳ ಪೊಲೀಸರು ಮಾಹಿತಿ ಪಡೆದು ಸ್ಥಳ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
إرسال تعليق